ಕಾಂಗ್ರೆಸ್ ಗೆ ಕೈ ಕೊಟ್ಟು ಶಿವಸೇನೆ ಸೇರಿದ ಪ್ರಿಯಾಂಕಾ ಚತುರ್ವೇದಿ

ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರು ಪಕ್ಷ ತೊರೆದ ಬೆನ್ನಲ್ಲೇ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಶಿವಸೇನೆ ಸೇರಿದ ಪ್ರಿಯಾಂಕಾ ಚತುರ್ವೇದಿ
ಶಿವಸೇನೆ ಸೇರಿದ ಪ್ರಿಯಾಂಕಾ ಚತುರ್ವೇದಿ
ಮುಂಬೈ: ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರು ಪಕ್ಷ  ತೊರೆದ ಬೆನ್ನಲ್ಲೇ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಹೌದು.. ಈ ಹಿಂದೆ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್‌ ಕಾರ್ಯಕರ್ತರ ಅಮಾನತನ್ನು ತೆರವುಗೊಳಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಪ್ರಿಯಾಂಕ ಈ ಬಗ್ಗೆ  ಟ್ವೀಟ್‌ ಮಾಡಿ ಪಕ್ಷದ ಮುಜುಗರಕ್ಕೆ ಕಾರಣವಾಗಿದ್ದರು. ಅಲ್ಲದೆ 'ಕಾಂಗ್ರೆಸ್ ಕಷ್ಟಪಟ್ಟು ದುಡಿಯುವವರ ಬದಲು ಕೊಳಕು ಗೂಂಡಾಗಳಿಗೆ ಪಕ್ಷ ಆದ್ಯತೆ ನೀಡುತ್ತಿದೆ ಎಂದು ಕಿಡಿಕಾರಿದ್ದರು. 
ಇದೀಗ ಲೋಕಸಭಾ ಚುನಾವಣೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ತೊರೆದ ಪ್ರಿಯಾಂಕ ಚತುರ್ವೇದಿ ಶಿವಸೇನೆ ಸೇರಿದ್ದಾರೆ.
ಇಂದು ಮುಂಬೈನಲ್ಲಿನ ಠಾಕ್ರೆ ನಿವಾಸ ಮಾತೋಶ್ರೀಗೆ ಭೇಟಿ ನೀಡಿದ್ದ ಪ್ರಿಯಾಂಕ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಬಳಿಕ ತಾವು ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಿರುವ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
'ನಾನು ಈ ಹಿಂದೆ ನೀಡಿದ್ದ ಹೇಳಿಕೆಗೆ ನಾನು ಬದ್ಧಳಾಗಿದ್ದೇನೆ. ಶಿವಸೇನೆ ಸೇರ್ಪಡೆ ನನ್ನ ದಿಢೀರ್ ನಿರ್ಧಾರವಲ್ಲ. ಸಾಕಷ್ಟು ಯೋಚಿಸಿಯೇ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com