ದೆಹಲಿಯಲ್ಲಿ ಮಾತ್ರ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ: ಎಎಪಿ

ದೆಹಲಿ ಬಿಟ್ಟು ಬೇರೆ ಕಡೆ ಮೈತ್ರಿಗೆ ಕಾಂಗ್ರೆಸ್ ನಿರಾಕರಿಸಿದ ನಂತರ ಬರೀ ದೆಹಲಿಯಲ್ಲಿ ಮಾತ್ರ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ....
ಮನಿಶ್ ಸಿಸೋಡಿಯಾ
ಮನಿಶ್ ಸಿಸೋಡಿಯಾ
ನವದೆಹಲಿ: ದೆಹಲಿ ಬಿಟ್ಟು ಬೇರೆ ಕಡೆ ಮೈತ್ರಿಗೆ ಕಾಂಗ್ರೆಸ್ ನಿರಾಕರಿಸಿದ ನಂತರ ಬರೀ ದೆಹಲಿಯಲ್ಲಿ ಮಾತ್ರ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಆಮ್ ಆದ್ಮಿ ಪಕ್ಷ(ಎಎಪಿ) ಶನಿವಾರ ಹೇಳಿದೆ. ಇದರೊಂದಿಗೆ ಬಹಳ ದಿನಗಳಿಂದ ನಡೆಯುತ್ತಿದ್ದ ಮೈತ್ರಿ ಮಾತುಕತೆ ಕೊನೆಗೂ ಮುರಿದು ಬಿದ್ದಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಉಪ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಗೆ ಮೂರು ಸ್ಥಾನ ಬಿಟ್ಟುಕೊಡುವುದು ಬಿಜೆಪಿಗೆ ಬಿಟ್ಟುಕೊಟ್ಟಂತೆ ಎಂದಿದ್ದಾರೆ.
ಹರಿಯಾಣದಲ್ಲಿ ಕಾಂಗ್ರೆಸ್ 6:3:1 ಸ್ಥಾನಗಳ ಹಂಚಿಕೆ ಪ್ರಸ್ತಾವನೆ ಮುಂದಿಟ್ಟಿತ್ತು. ಕಾಂಗ್ರೆಸ್ ಗೆ 6, ಜೆಜೆಪಿಗೆ ಮೂರು ಹಾಗೂ ಎಎಪಿಗೆ 1 ಸ್ಥಾನಕ್ಕೆ ನಾವು ಒಪ್ಪಿಕೊಂಡಿದ್ದೇವು. ಆದರೂ ಕಾಂಗ್ರೆಸ್ ಹರಿಯಾಣದಲ್ಲಿ ಮೈತ್ರಿಗೆ ಹಿಂದೇಟು ಹಾಕುತ್ತಿದೆ ಎಂದು ಸಿಸೋಡಿಯಾ ದೂರಿದ್ದಾರೆ.
ಹರಿಯಾಣದಲ್ಲಿ ನಮ್ಮ ಮಿತ್ರ ಪಕ್ಷ ಜೆಜೆಪಿ ಜತೆ ಚರ್ಚಿಸಿದ ನಂತರ ಕಾಂಗ್ರೆಸ್ ಸೀಟು ಹಂಚಿಕೆ ಪ್ರಸ್ತಾಪಕ್ಕೆ ಒಪ್ಪಿಕೊಂಡಿದ್ದೇವೆ. ಆದರೆ ಈಗ ಕಾಂಗ್ರೆಸ್ ಈಗ ಜೆಜೆಪಿ ಎರಡಕ್ಕಿಂತ ಹೆಚ್ಚು ಸೀಟು ಬಿಟ್ಟುಕೊಡಲು ಸಿದ್ಧವಿಲ್ಲ. ಈಗ 7:2:1 ಸೂತ್ರ ಮುಂದಿಟ್ಟಿದೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
ಈ ಮಧ್ಯೆ, ಹರಿಯಾಣದಲ್ಲಿ ಮೈತ್ರಿ ಮಾತುಕತೆ ಸಂಪೂರ್ಣ ಮುರಿದುಬಿದ್ದಿದ್ದು, ದೆಹಲಿ ಆಪ್ ಈಗಲೂ ಮೈತ್ರಿಗೆ ಮುಕ್ತವಾಗಿದ್ದು, ಕಾಂಗ್ರೆಸ್ ಗೆ ಎರಡು ಸ್ಥಾನ ಬಿಟ್ಟುಕೊಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
"ಕಾಂಗ್ರೆಸ್ ನೊಂದಿಗೆ ಎಲ್ಲಾ ರಾಜ್ಯಗಳಲ್ಲೂ ಮೈತ್ರಿ ಮಾಡಿಕೊಳ್ಳಲು ಎಎಪಿ ಬಯಸಿದೆ. ಆದರೆ ಕಾಂಗ್ರೆಸ್ ದೆಹಲಿಯಲ್ಲಿ ಮಾತ್ರವೇ ಮೈತ್ರಿ ಬೇಡಿಕೆ ಇಟ್ಟಿದ್ದರಿಂದ, ಅದು ಸಾಧ್ಯವಿಲ್ಲ ಎಂದು ಆಪ್ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com