ಪಾಕ್ ಮೇಲೆ ಆಕ್ರಮಣ ಮಾಡುವ ಪ್ರಧಾನಿ ಬೇಕು, ಅದಕ್ಕಾಗಿ ಮೈತ್ರಿ: ಉದ್ಧವ್ ಠಾಕ್ರೆ

ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಲು ಧೈರ್ಯ ಹೊಂದಿರುವ ಪ್ರಧಾನಿ ನಮಗೆ ಬೇಕು ಆದ್ದರಿಂದ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದು ಬಿಜೆಪಿ-ಶಿವಸೇನೆ
ಪಾಕ್ ಮೇಲೆ ಆಕ್ರಮಣ ಮಾಡುವ ಪ್ರಧಾನಿ ಬೇಕು, ಅದಕ್ಕಾಗಿ ಮೈತ್ರಿ: ಉದ್ಧವ್ ಠಾಕ್ರೆ
ಪಾಕ್ ಮೇಲೆ ಆಕ್ರಮಣ ಮಾಡುವ ಪ್ರಧಾನಿ ಬೇಕು, ಅದಕ್ಕಾಗಿ ಮೈತ್ರಿ: ಉದ್ಧವ್ ಠಾಕ್ರೆ
ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಲು ಧೈರ್ಯ ಹೊಂದಿರುವ ಪ್ರಧಾನಿ ನಮಗೆ ಬೇಕು ಆದ್ದರಿಂದ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದು ಬಿಜೆಪಿ-ಶಿವಸೇನೆ ಮೈತ್ರಿಯನ್ನು ಸಮರ್ಥಿಸಿಕೊಂಡಿದ್ದಾರೆ. 
ಮೋದಿ ಆಡಳಿತದ 5 ವರ್ಷಗಳಲ್ಲಿ 4.5 ವರ್ಶ ಶಿವಸೇನೆ ಬಿಜೆಪಿ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿತ್ತು. ಆದರೆ 2019 ರ ಚುನಾವಣೆಗೆ ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. 
ಔರಂಗಾಬಾದ್ ನಲ್ಲಿ ಶಿವಸೇನಾ ಅಭ್ಯರ್ಥಿ ಚಂದ್ರಕಾಂತ್ ಖೈರೆ ಪರ ಪ್ರಚಾರ ನಡೆಸಿದ ವೇಳೆ ಬಿಜೆಪಿ-ಶಿವಸೇನೆ ಮೈತ್ರಿ ಬಗ್ಗೆ ಉದ್ಧವ್ ಠಾಕ್ರೆ ಮಾತನಾಡಿದ್ದಾರೆ. ಬಿಜೆಪಿಯನ್ನು ಟೀಕಿಸಿದ ನಂತರವೂ ಆ ಪಕ್ಷದೊಂದಿಗೇ ಮೈತ್ರಿ ಮಾಡಿಕೊಂಡಿದ್ದರ ಬಗ್ಗೆ ಉದ್ಧವ್ ಠಾಕ್ರೆ ಸ್ಪಷ್ಟನೆ ನೀಡಿದ್ದಾರೆ. 
ಪಾಕಿಸ್ತಾನದ ನೆಲಕ್ಕೆ ನುಗ್ಗಿ ಅಲ್ಲಿಯೇ ಅವರ ಮೇಲೆ ಆಕ್ರಮಣ ಮಾಡುವ ಪ್ರಧಾನಿ ನಮಗೆ ಬೇಕಿದೆ. ಇದೇ ಕಾರಣಕ್ಕಾಗಿ ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ, ಮರಾಠವಾಡ ಹಾಗೂ ಮಹಾರಾಷ್ಟ್ರದ ಕಲ್ಯಾಣಕ್ಕಾಗಿ ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಠಾಕ್ರೆ ಹೇಳಿದ್ದಾರೆ. 
ಇಡೀ ದೇಶಕ್ಕೆ ಯಾವ ಕಾನೂನು ಅನ್ವಯವಾಗುತ್ತೋ ಅದು ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗಬೇಕು, ಆದರೆ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ವಿಧಿ 370 ರದ್ದುಗೊಳ್ಳುವುದು ಬೇಕಿಲ್ಲ ಎಂದು ಉದ್ಧವ್ ಠಾಕ್ರೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com