ಗಾಂಧಿ ಕುಟುಂಬದ ಸದಸ್ಯರು, ಭಾರತದಿಂದಾಗಲಿ, ಇಟಾಲಿಯಿಂದಾಗಲಿ ಮೋದಿಯನ್ನು ಸೋಲಿಸಲು ಸಾಧ್ಯವಿಲ್ಲ!

ಗಾಂಧಿ ಕುಟುಂಬದ ಸದಸ್ಯರು, ಭಾರತದಿಂದಾಗಲಿ ಅಥವಾ ಇಟಾಲಿಯಿಂದಾಗಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವುದಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

Published: 21st April 2019 12:00 PM  |   Last Updated: 21st April 2019 01:23 AM   |  A+A-


Any Gandhi family member, from India or Italy, can't defeat PM Narendra Modi in Varanasi: Smriti Irani

ಗಾಂಧಿ ಕುಟುಂಬದ ಸದಸ್ಯರು, ಭಾರತದಿಂದಾಗಲಿ, ಇಟಾಲಿಯಿಂದಾಗಲಿ ಮೋದಿಯನ್ನು ಸೋಲಿಸಲು ಸಾಧ್ಯವಿಲ್ಲ!

Posted By : SBV SBV
Source : Online Desk
ನವದೆಹಲಿ: ಗಾಂಧಿ ಕುಟುಂಬದ ಸದಸ್ಯರು, ಭಾರತದಿಂದಾಗಲಿ ಅಥವಾ ಇಟಾಲಿಯಿಂದಾಗಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವುದಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. 

ಕಾಂಗ್ರೆಸ್ ಪಕ್ಷವನ್ನು ಮುಳುಗುತ್ತಿರುವ ಹಡಗು ಎಂದು ಹೇಳಿರುವ ಸ್ಮೃತಿ ಇರಾನಿ, ಭಾರತದಿಂದಾಗಲೀ, ಇಟಾಲಿಯಿಂದಾಗಲಿ ಗಾಂಧಿ ಕುಟುಂಬದ ಯಾವುದೇ ಸದಸ್ಯರು ವಾರಾಣಾಸಿ  ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೂ  ಸಹ ಮೋದಿಯನ್ನು ಸೋಲಿಸುವುದಕ್ಕೆ ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಸ್ಮೃತಿ ಇರಾನಿ  ಹೇಳಿದ್ದಾರೆ.
 
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ಮೃತಿ ಇರಾನಿ ಈ ಹೇಳಿಕೆ ನೀಡಿದ್ದಾರೆ. ಪ್ರಿಯಾಂಕ ವಾಧ್ರ ಮೋದಿ ವಿರುದ್ಧ ವಾರಾಣಸಿಯಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ ವರದಿಯಾಗಿರುವ ಬೆನ್ನಲ್ಲೇ ಸ್ಮೃತಿ ಇರಾನಿ ಈ ಹೇಳಿಕೆ ನೀಡಿದ್ದಾರೆ. 
Stay up to date on all the latest ದೇಶ news with The Kannadaprabha App. Download now
facebook twitter whatsapp