ಬಾಬರಿ ಮಸೀದಿ ಕೆಡವಲು ನಾನೂ ಸಹಕರಿಸಿದ್ದೆ, ಆ ಬಗ್ಗೆ ಹೆಮ್ಮೆಯಿದೆ: ಪ್ರಜ್ಞಾ ಸಿಂಗ್ ಮತ್ತೊಂದು ಸ್ಫೋಟಕ ಹೇಳಿಕೆ

ಬಾಬರಿ ಮಸೀದಿ ಕೆಡವಲು ನಾನೂ ಸಹಕರಿಸಿದ್ದೆ, ಆ ಬಗ್ಗೆ ಹೆಮ್ಮೆಯಿದೆ ಎಂದು ಹೇಳುವ ಮೂಲಕ ವಿವಾದಿತ ಸನ್ಯಾಸಿನಿ ಸಾಧ್ವಿ ಪ್ರಜ್ಞಾ ಸಿಂಗ್ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಭೋಪಾಲ್: ಬಾಬರಿ ಮಸೀದಿ ಕೆಡವಲು ನಾನೂ ಸಹಕರಿಸಿದ್ದೆ, ಆ ಬಗ್ಗೆ ಹೆಮ್ಮೆಯಿದೆ ಎಂದು ಹೇಳುವ ಮೂಲಕ ವಿವಾದಿತ ಸನ್ಯಾಸಿನಿ ಸಾಧ್ವಿ ಪ್ರಜ್ಞಾ ಸಿಂಗ್ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ನಿಷ್ಠಾವಂತ ಪೊಲೀಸ್ ಅಧಿಕಾರಿ, ಹುತಾತ್ಮ ಹೇಮಂತ್ ಕರ್ಕರೆ ವಿರುದ್ಧ ಹೇಳಿಕೆ ನೀಡುವ ಮೂಲಕ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದ, ಪ್ರಜ್ಞಾ ಠಾಕೂರ್ ಇದೀಗ 'ಬಾಬರಿ ಮಸೀದಿಯ ತುದಿಗೆ ಏರಿ ಮಸೀದಿ ಕೆಡವಲು ನಾನೂ ನೆರವಾಗಿದ್ದೆ' ಎನ್ನುವ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬಾಬರಿ ಮಸೀದಿ ವಿವಾದವನ್ನು ಮತ್ತೆ ರಾಜಕೀಯಕ್ಕೆ ಎಳೆದು ತಂದಿರುವ ಪ್ರಜ್ಞಾ ಶನಿವಾರ ಭೋಪಾಲ್‌ನಲ್ಲಿ ಪ್ರಚಾರ ಸಂದರ್ಭದಲ್ಲಿ ಟಿವಿ ಚಾನಲ್‌ಗೆ ನೀಡಿದ ಹೇಳಿಕೆಯಲ್ಲಿ "ನಾವು ಖಂಡಿತಾ ರಾಮಮಂದಿರ ಕಟ್ಟುತ್ತೇವೆ. ಭವ್ಯವಾದ ಮಂದಿರ ನಿರ್ಮಿಸುತ್ತೇವೆ. ರಾಮಮಂದಿರ ನಿರ್ಮಾಣಕ್ಕೆ ಕಾಲಮಿತಿ ಇದೆಯೇ ಎಂದು ಪ್ರಶ್ನಿಸಿದಾಗ, ನಾವು ಮಂದಿರ ನಿರ್ಮಿಸುತ್ತೇವೆ. ಈಗಾಗಲೇ ನಾವು ಮಸೀದಿ ಕೆಡವಿದ್ದೇವೆ ಎಂದು ಹೇಳಿದರು.
"ಮಸೀದಿ ಧ್ವಂಸಗೊಳಿಸಲು ನಾನು ಗೋಪುರದ ತುದಿಗೆ ಏರಿದ್ದೆ. ದೇವರು ಇದನ್ನು ಮಾಡುವ ಅಪೂರ್ವ ಅವಕಾಶ ನೀಡಿದ್ದಕ್ಕೆ ಮತ್ತು ಆ ಶಕ್ತಿ ನೀಡಿದ್ದಕ್ಕೆ ನನಗೆ ಹೆಮ್ಮೆ ಇದೆ. ನಾನು ಅದನ್ನು ಸಾಧಿಸಿದೆ. ದೇಶದ ಕಳಂಕವನ್ನು ಅಳಿಸಿ ಹಾಕಿದೆ. ಇದೀಗ ನಾವು ಅಲ್ಲಿ ಭವ್ಯವಾದ ಮಂದಿರ ನಿರ್ಮಿಸುತ್ತೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com