ಅಭಿನಂದನ್ ವರ್ಧಮಾನ್‍ರನ್ನು ಬಿಡುಗಡೆ ಮಾಡದಿದ್ದಿದ್ರೆ ಅದು ಪಾಕ್‌ಗೆ ಸಾವಿನ ರಾತ್ರಿಯಾಗಿರುತ್ತಿತ್ತು: ಪ್ರಧಾನಿ ಮೋದಿ

ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದಿದ್ರೆ ಅದು ಪಾಕಿಸ್ತಾನಕ್ಕೆ ಸಾವಿನ ರಾತ್ರಿಯಾಗಿರುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Published: 21st April 2019 12:00 PM  |   Last Updated: 21st April 2019 08:21 AM   |  A+A-


Narendra Modi

ನರೇಂದ್ರ ಮೋದಿ

Posted By : VS VS
Source : Online Desk
ಅಹಮದಾಬಾದ್: ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದಿದ್ರೆ ಅದು ಪಾಕಿಸ್ತಾನಕ್ಕೆ ಸಾವಿನ ರಾತ್ರಿಯಾಗಿರುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಭಿನಂದನ್ ಪಾಕಿಸ್ತಾನದಿಂದ ವಾಪಸ್ ಆದ ಪ್ರಕ್ರಿಯೆಯ ಬಗ್ಗೆಯೂ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "ನಮ್ಮ ಪೈಲಟ್ ಗೆ ಏನಾದರೂ ಆದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದ್ದೆವು. 

ಅಭಿನಂದನ್ ಗೆ ಏನಾದರು ಆದಲ್ಲಿ ಮೋದಿ ನಮಗೆ ಹೀಗೆ ಮಾಡಿದರು ಎಂದು ಇಡೀ ಪ್ರಪಂಚದ ಮುಂದೆ ನೀವು ಹೇಳುತ್ತಲೇ ಇರಬೇಕು ಹಾಗೆ ಮಾಡುತ್ತೇವೆ ಎಂದು ನಾವು ಎಚ್ಚರಿಸಿದ್ದೆವು ಎಂದು ಮೋದಿ ಹೇಳಿದ್ದಾರೆ. 

ಅಭಿನಂದನ್ ಪಾಕ್ ವಶದಲ್ಲಿದ್ದಾಗ ಮೋದಿ 12 ಕ್ಷಿಪಣಿಗಳನ್ನು ಸಿದ್ಧಗೊಳಿಸಿದ್ದರು. ಎರಡನೇ ದಿನಕ್ಕೇ ಪಾಕಿಸ್ತಾನ ಅಭಿನಂದನ್ ಬಿಡುಗಡೆಯನ್ನು ಘೋಷಿಸಿತ್ತು. ಇಲ್ಲವಾದಲ್ಲಿ ಆ ರಾತ್ರಿ "ರಕ್ತಪಾತದ ರಾತ್ರಿಯಾಗಿರುತ್ತಿತ್ತು" ಎಂದು ಅಮೆರಿಕದ ಹಿರಿಒಯ ಅಧಿಕಾರಿಗಳಲ್ಲೊಬ್ಬರು ಹೇಳಿದ್ದರು. ಇದನ್ನು ಹೇಳಿದ್ದು ಅಮೆರಿಕ, ಈಗ ಈ ಬಗ್ಗೆ ನಾನೇನು ಹೇಳುವುದಕ್ಕಿಲ್ಲ. ಸಮಯ ಬಂದಾಗ ನಾನು ಈ ಬಗ್ಗೆ ಮಾತನಾಡುತ್ತೇನೆ ಎಂದು ಮೋದಿ ಹೇಳಿದ್ದಾರೆ.
Stay up to date on all the latest ದೇಶ news with The Kannadaprabha App. Download now
facebook twitter whatsapp