ಕೆಲಸ ಮಾಡ್ಲಿಲ್ಲ ಅಂದ್ರೆ ನನ್ನ ಮಗನ ಬಟ್ಟೆ ಹರಿಯಿರಿ: ಕಮಲ್ ನಾಥ್

ಛಿಂದ್ವಾರ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸಿರುವ ಮಧ್ಯಪ್ರದೇಶ ಸಿಎಂ ಕಮಲ್ ನಾಥ್, ನೀಡಿದ ಭರವಸೆಗಳನ್ನು ಈಡೇರಿಸದೇ ಇದ್ದರೆ ತಮ್ಮ ಪುತ್ರನ ಬಟ್ಟೆ ಹರಿಯಿರಿ ಎಂದು ಜನತೆಗೆ ಹೇಳಿದ್ದಾರೆ.

Published: 21st April 2019 12:00 PM  |   Last Updated: 21st April 2019 03:04 AM   |  A+A-


Kamal Nath

ಕೆಲಸ ಮಾಡ್ಲಿಲ್ಲ ಅಂದ್ರೆ ನನ್ನ ಮಗನ ಬಟ್ಟೆ ಹರಿಯಿರಿ: ಕಮಲ್ ನಾಥ್

Posted By : SBV SBV
Source : PTI
ಛಿಂದ್ವಾರ: ಛಿಂದ್ವಾರ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸಿರುವ ಮಧ್ಯಪ್ರದೇಶ ಸಿಎಂ ಕಮಲ್ ನಾಥ್, ನೀಡಿದ ಭರವಸೆಗಳನ್ನು ಈಡೇರಿಸದೇ ಇದ್ದರೆ ತಮ್ಮ ಪುತ್ರನ ಬಟ್ಟೆ ಹರಿಯಿರಿ ಎಂದು ಜನತೆಗೆ ಹೇಳಿದ್ದಾರೆ. 

ಕ್ಷೇತ್ರದೊಂದಿಗೆ ತಮಗಿರುವ 40 ವರ್ಷಗಳ ನಂಟನ್ನು ಚುನಾವಣಾ ಪ್ರಚಾರದಲ್ಲಿ ಉಲ್ಲೇಖಿಸಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್, ಛಿಂದ್ವಾರ ಲೋಕಸಭಾ ಕ್ಷೇತ್ರದ ಜನತೆಯ ಸೇವೆಯ ಕೆಲಸವನ್ನು ಈಗ ತಮ್ಮ ಮಗ ನಕುಲ್ ಗೆ ವಹಿಸುತ್ತಿದ್ದು ತಾವು ಮಧ್ಯಪ್ರದೇಶದತ್ತ ಪೂರ್ತಿ ಗಮನಗರಿಸಬಹುದಾಗಿ ಹೇಳಿದ್ದಾರೆ. 

ಕ್ಷೇತ್ರದ ಜನತೆಯ ಸೇವೆ ಮಾಡುವ ಜವಾಬ್ದಾರಿಯನ್ನು ನಾನು ನಕುಲ್ ಗೆ ವಹಿಸುತ್ತಿದ್ದೇನೆ. ಒಂದು ವೇಳೆ ಆತ ಕೆಲಸ ಮಾಡದೇ, ಭರವಸೆಗಳನ್ನು ಈಡೇರಿಸದೇ ಇದ್ದರೆ ಬಟ್ಟೆ ಹರಿಯಿರಿ, ಆತನನ್ನು ಪ್ರಶ್ನೆ ಮಾಡಿ ಎಂದು ಜನತೆಗೆ ಹೇಳಿದ್ದಾರೆ. 
Stay up to date on all the latest ದೇಶ news with The Kannadaprabha App. Download now
facebook twitter whatsapp