ಪಶ್ಚಿಮ ಬಂಗಾಳ 10-15 ವರ್ಷಗಳ ಹಿಂದಿನ ಬಿಹಾರದಂತಾಗಿದೆ: ಚುನಾವಣಾ ಆಯೋಗದ ವಿಶೇಷ ವೀಕ್ಷಕರು

ಹಾಲಿ ಪಶ್ಚಿಮ ಬಂಗಾಳ ರಾಜ್ಯ ಈ ಹಿಂದೆ ಅಂದರೆ 10-15 ವರ್ಷಗಳ ಹಿಂದಿನ ಬಿಹಾರದಂತಾಗಿದ್ದು, ಇಲ್ಲಿನ ಪ್ರಜೆಗಳಿಗೆ ಚುನಾವಣೆ ಮತ್ತು ಜನಪ್ರತಿನಿಧಿಗಳ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ವಿಶೇಷ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

Published: 21st April 2019 12:00 PM  |   Last Updated: 21st April 2019 08:26 AM   |  A+A-


'West Bengal Is Like Bihar Of 10-15 Years Back': State's Special Poll Observer

ಸಂಗ್ರಹ ಚಿತ್ರ

Posted By : SVN SVN
Source : Online Desk
ಕೋಲ್ಕತಾ: ಹಾಲಿ ಪಶ್ಚಿಮ ಬಂಗಾಳ ರಾಜ್ಯ ಈ ಹಿಂದೆ ಅಂದರೆ 10-15 ವರ್ಷಗಳ ಹಿಂದಿನ ಬಿಹಾರದಂತಾಗಿದ್ದು, ಇಲ್ಲಿನ ಪ್ರಜೆಗಳಿಗೆ ಚುನಾವಣೆ ಮತ್ತು ಜನಪ್ರತಿನಿಧಿಗಳ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ವಿಶೇಷ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣಾ ಆಯೋಗದ ವತಿಯಿಂದ ಪಶ್ಚಿಮ ಬಂಗಾಳಕ್ಕೆ ವಿಶೇಷ ವೀಕ್ಷಕರಾಗಿ ನೇಮಕರಾಗಿರುವ ಅಜಯ್ ವಿ ನಾಯಕ್ ಅವರು ಖಾಸಗಿ ಮಾಧ್ಯಮದೊಂದಿಗೆ ಈ ಬಗ್ಗೆ ಮಾತನಾಡಿದ್ದು, 'ಚುನಾವಣಾ ಆಯೋಗದ ವಿಶೇಷ ವೀಕ್ಷಕನಾಗಿ ನಾನು ರಾಜ್ಯಾದ್ಯಾಂತ ಪ್ರವಾಸ ಮಾಡಿದ್ದೇನೆ. ನನ್ನ ಅನುಭವಕ್ಕೆ ಬಂದಂತೆ ಪ್ರಸ್ತುತ ಪಶ್ಚಿಮ ಬಂಗಾಳ 10-15 ವರ್ಷಗಳ ಹಿಂದಿನ ಬಿಹಾರದಂತಾಗಿದೆ. ಇಲ್ಲಿನ ಪ್ರಜೆಗಳಿಗೆ ಚುನಾವಣೆ, ಸ್ಥಳೀಯ ಜನ ಪ್ರತಿನಿಧಿಗಳು ಮತ್ತು ಸ್ಥಳೀಯ ಪೊಲೀಸರ ಮೇಲೆ ನಂಬಿಕೆಯೇ ಇಲ್ಲ. ಹೀಗಾಗಿ ಚುನಾವಣೆ ಎಂದರೆ ಮೂಗು ಮುರಿಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಚುನಾವಣಾ ಭದ್ರತೆ ಕುರಿತು ಮಾತನಾಡಿದ ಅಜಯ್ ವಿ ನಾಯಕ್, ಇಲ್ಲಿನ ಪರಿಸ್ಥಿತಿ ಅವಲೋಕಿಸಿಯೇ ನಾವು ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಮಟ್ಟಿಗೆ ಕೇಂದ್ರೀಯ ಪಡೆಗಳನ್ನು ಭದ್ರತೆ ನಿಯೋಜನೆ ಮಾಡುವಂತೆ ಚುನಾವಣಾ ಅಯೋಗಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಎಲ್ಲ ಬೂತ್ ಗಳಲ್ಲಿಯೂ ಕೇಂದ್ರೀಯ ಭದ್ರತಾ ಪಡೆಗಳೇ ಭದ್ರತೆಗೆ ನಿಯೋಜನೆಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ಇನ್ನು ಪಶ್ಚಿಮ ಬಂಗಾಳ ವಿಶೇಷ ವೀಕ್ಷಕರಾಗಿ ನೇಮಕರಾಗಿರುವ ಅಜಯ್ ವಿ ನಾಯಕ್ ಅವರ ವಿರುದ್ಧ ತೃಣಮೂಲ ಕಾಂಗ್ರೆಸ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಅಜಯ್ ವಿ ನಾಯಕ್ ಅವರು ಪಕ್ಷಪಾತಿಯಾಗಿ ಕಾರ್ಯ ನಿರ್ಲವಹಿಸುತ್ತಿದ್ದು, ರಾಜಕೀಯವಾಗಿ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದೆ.
Stay up to date on all the latest ದೇಶ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp