ಅಹ್ಮದಾಬಾದ್: ಪತ್ನಿ ಸೋನಲ್ ಜೊತೆಗೆ ಮತದಾನ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

ಗುಜರಾತಿನ ಅಹ್ಮದಾಬಾದಿನ ನರನ್ ಪುರ ಉಪ- ವಲಯ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಅವರ ಪತ್ನಿ ಸೋನಲ್ ಶಾ ಮತ ಚಲಾಯಿಸಿದರು.

Published: 23rd April 2019 12:00 PM  |   Last Updated: 23rd April 2019 12:07 PM   |  A+A-


Amit sha, Sonal

ಅಮಿತ್ ಶಾ, ಸೋನಲ್

Posted By : ABN ABN
Source : ANI
ಅಹ್ಮದಾಬಾದ್ : ಗುಜರಾತಿನ ಅಹ್ಮದಾಬಾದಿನ ನರನ್ ಪುರ ಉಪ- ವಲಯ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಅವರ ಪತ್ನಿ ಸೋನಲ್ ಶಾ ಮತ ಚಲಾಯಿಸಿದರು.

ತದನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಮಿತ್ ಶಾ, ನಿಮ್ಮ ಒಂದು ಮತದಿಂದ ರಾಷ್ಟ್ರದ ಭದ್ರತೆ, ಸದೃಢತೆ, ಅಭಿವೃದ್ಧಿ ಮಾಡಬಹುದಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವಂತೆ ದೇಶಾದ್ಯಂತ ಮತದಾರರ ಬಳಿ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.

ಭವಿಷ್ಯದ ಭಾರತಕ್ಕಾಗಿ ಮತದಾನ ಮಾಡುವಂತೆ ಯುವ ಜನಾಂಗ ಹಾಗೂ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರ ಬಳಿ ಮನವಿ ಮಾಡುವುದಾಗಿ ಅಮಿತ್ ಶಾ ತಿಳಿಸಿದರು.

ರಾಜ್ಯಸಭೆ ಸದಸ್ಯರಾಗಿರುವ ಅಮಿತ್ ಶಾ, ಗಾಂಧಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಗಾಂಧಿನಗರ ಹೊರತುಪಡಿಸಿದಂತೆ  ಕಚ್ಚ್,  ಬನಸ್ಕಂತಾ, ಪಠಣ್ , ರಾಜ್ ಕೋಟ್, ಜಾಮ್ ನಗರ ಮೊದಲಾದ ಕಡೆಗಳಲ್ಲಿ ಮತದಾನ ನಡೆಯುತ್ತಿದೆ.
Stay up to date on all the latest ದೇಶ news with The Kannadaprabha App. Download now
facebook twitter whatsapp