ರಷ್ಯಾದವರು ಹಣ ಪಡೆದು ಇವಿಎಂ ಗಳನ್ನು ಹ್ಯಾಕ್ ಮಾಡುತ್ತಾರೆ: ಚಂದ್ರಬಾಬು ನಾಯ್ಡು ಆರೋಪ

ಮತಯಂತ್ರಗಳ ವಿಶ್ವಾಸಾರ್ಹತೆಯನ್ನು ಮತ್ತೊಮ್ಮೆ ಪ್ರಶ್ನಿಸಿರುವ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಈಗ ಇವಿಎಂ ತಿರುಚುವ ಕಲೆ ರಷ್ಯನ್ನರಿಗೆ ಕರಗತ ಎಂದು ಹೇಳಿದ್ದಾರೆ.
ರಷ್ಯಾದವರು ಹಣ ಪಡೆದು ಇವಿಎಂ ಗಳನ್ನು ಹ್ಯಾಕ್ ಮಾಡುತ್ತಾರೆ: ಚಂದ್ರಬಾಬು ನಾಯ್ಡು ಆರೋಪ
ರಷ್ಯಾದವರು ಹಣ ಪಡೆದು ಇವಿಎಂ ಗಳನ್ನು ಹ್ಯಾಕ್ ಮಾಡುತ್ತಾರೆ: ಚಂದ್ರಬಾಬು ನಾಯ್ಡು ಆರೋಪ
ಆಂಧ್ರಪ್ರದೇಶ: ಮತಯಂತ್ರಗಳ ವಿಶ್ವಾಸಾರ್ಹತೆಯನ್ನು ಮತ್ತೊಮ್ಮೆ ಪ್ರಶ್ನಿಸಿರುವ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಈಗ ಇವಿಎಂ ತಿರುಚುವ ಕಲೆ ರಷ್ಯನ್ನರಿಗೆ ಕರಗತ ಎಂದು ಹೇಳಿದ್ದಾರೆ.
ರಷ್ಯಾದ ಕೆಲವು ಜನರು ಸಕ್ರಿಯರಾಗಿದ್ದು, ಅವರು ಒಂದಷ್ಟು ಕೋಟಿ ರೂಪಾಯಿಗಳನ್ನು ನೀಡಿದರೆ ಇವಿಎಂ ನ್ನು ಹ್ಯಾಕ್ ಮಾಡುತ್ತಾರೆ ಎಂಬ ವದಂತಿಗಳಿವೆ, ಇದನ್ನು ನಾನು ದೃಢೀಕರಿಸಲು ಸಾಧ್ಯವಿಲ್ಲ. ಆದರೆ ಕೋಟಿಗಳ ಲೆಕ್ಕದಲ್ಲಿ ಅವರಿಗೆ ಹಣ ನೀಡಿದರೆ ಇವಿಎಂ ಹ್ಯಾಕ್ ಮಾಡಿ ಗೆಲ್ಲಲು ಸಾಧ್ಯವಾಗುವಂತೆ ಮಾಡುತ್ತಾರೆ ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಇವಿಎಂಗಳನ್ನು ವಿವಿಧ ರೀತಿಗಳಲ್ಲಿ ಹ್ಯಾಕ್ ಮಾಡಬಹುದು, 18 ರಾಷ್ಟ್ರಗಳು ಇವಿಎಂ ಗಳನ್ನು ಬಳಸುತ್ತಿವೆ ಎಂದು ನಾಯ್ಡು ಹೇಳಿದ್ದಾರೆ. 
ಚುನಾವಣೆಯ ನಂತರ ಚುನಾವಣಾ ಆಯೋಗ ಎಲ್ಲಾ ವಿವಿಪ್ಯಾಟ್  ರೋಲ್ ಗಳನ್ನೂ ತಪಾಸಣೆಗೊಳಪಡಿಸಬೇಕೆಂದು ಚಂದ್ರಬಾಬು ನಾಯ್ಡು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com