ಉಗ್ರರು ನಿಮ್ಮ ಸಂಬಂಧಿಕರೇ? ರಾಹುಲ್, ಮಾಯಾವತಿ, ಅಖಿಲೇಶ್ ಗೆ ಅಮಿತ್ ಶಾ ಪ್ರಶ್ನೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್ಪಿ ವರಿಷ್ಠೆ ಮಾಯಾವತಿ ಹಾಗೂ ಎಸ್ಪಿ ನಾಯಕ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉಗ್ರರು ನಿಮ್ಮ ಸಂಬಂಧಿಕರೇ ಎಂದು ಅವರನ್ನು ಕೇಳಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ಗಾಜಿಪುರ್ : ಭಾರತೀಯ ವಾಯುಸೇನೆಯಿಂದ ಪಾಕಿಸ್ತಾನದ ಬಾಲಾಕೋಟ್ ನಲ್ಲಿ ನಡೆದ ಏರ್ ಸ್ಟ್ರೈಕ್  ಹೂಗಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್ಪಿ ವರಿಷ್ಠೆ ಮಾಯಾವತಿ ಹಾಗೂ ಎಸ್ಪಿ ನಾಯಕ ಅಖಿಲೇಶ್  ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉಗ್ರರು ನಿಮ್ಮ ಸಂಬಂಧಿಕರೇ ಎಂದು ಅವರನ್ನು ಕೇಳಿದ್ದಾರೆ.

ಉತ್ತರ ಪ್ರದೇಶದ ಗಾಜಿಪುರ್ ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ,  ಏರ್ ಸ್ಟ್ರೈಕ್ ಬಗ್ಗೆ ಇಡೀ ದೇಶದಲ್ಲಿಯೇ ಸಂಭ್ರಮಾಚರಣೆ ನಡೆಸಿದರೆ, ಪಾಕಿಸ್ತಾನ ಮತ್ತು ರಾಹುಲ್ ಗಾಂಧಿ, ಮಾಯಾವತಿ, ಮತ್ತು ಅಖಿಲೇಶ್ ಅವರ ಕಚೇರಿಗಳಲ್ಲಿ ದು:ಖ ಆವರಿಸಿತ್ತು ಎಂದು ಹೇಳಿದರು.

ಪಾಕಿಸ್ತಾನದ ಉಗ್ರರು ಹತ್ಯೆಯಾದಾಗ ಇವರೆಲ್ಲರೂ ಏಕೆ ದು:ಖದಲ್ಲಿದ್ದರು ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾವು ಬಿಜೆಪಿಗೆ ಸೇರಿದ್ದು, ನರೇಂದ್ರ ಮೋದಿ ನಮ್ಮ ಪ್ರಧಾನಿ. ಉಗ್ರರೊಂದಿಗೆ ಯಾವುದೇ ರಾಜಿ ಇಲ್ಲ. ದೇಶದ ಭದ್ರತೆಯೊಂದಿಗೆ ಯಾರು ಆಟವಾಡಬಾರದು ಎಂದರು.

ಜಮ್ಮು- ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿಯಾಗಬೇಕೆಂಬ  ನ್ಯಾಷನಲ್ ಕಾನ್ಫೆರೆನ್ಸ್  ನಾಯಕ ಒಮರ್ ಅಬ್ದುಲ್ಲಾ ಬೇಡಿಕೆ ಬಗ್ಗೆ ರಾಹುಲ್ ಗಾಂಧಿ ಮೌನವಾಗಿರುವುದನ್ನು ಅಮಿತ್ ಶಾ ಟೀಕಿಸಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಮೌನವಾಗಿರುವುದನ್ನು ಗಮನಿದರೆ ಅವರು ವೋಟ್ ಬ್ಯಾಂಕ್ ಬಗ್ಗೆ ಯೋಚಿಸಿರುವ ಸಾಧ್ಯತೆ ಇದೆ. ಕಾಶ್ಮೀರವನ್ನು ಭಾರತದಿಂದ  ಯಾರೂ ಪ್ರತ್ಯೇಕಿಸಲು ಸಾಧ್ಯವಿಲ್ಲ, ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಅಮಿತ್ ಶಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com