ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಆಸ್ತಿಯಲ್ಲಿ ಶೇ. 52 ರಷ್ಟು ಏರಿಕೆ

ಕಳೆದ ಐದು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯಲ್ಲಿ ಶೇ. 52 ರಷ್ಟು ಏರಿಕೆಯಾಗಿದೆ. ನಾಮಪತ್ರ ಜೊತೆಗೆ ಸಲ್ಲಿಸಲಾಗಿರುವ ಆಸ್ತಿ ವಿವರದ ಪ್ರಮಾಣ ಪತ್ರದಲ್ಲಿ...
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ವಾರಣಾಸಿ: ಕಳೆದ ಐದು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯಲ್ಲಿ ಶೇ. 52 ರಷ್ಟು ಏರಿಕೆಯಾಗಿದೆ.ನಾಮಪತ್ರ ಜೊತೆಗೆ ಸಲ್ಲಿಸಲಾಗಿರುವ ಆಸ್ತಿ ವಿವರದ ಪ್ರಮಾಣ ಪತ್ರದಲ್ಲಿ ನರೇಂದ್ರ ಮೋದಿ ಇದನ್ನು ಘೋಷಿಸಿಕೊಂಡಿದ್ದಾರೆ.

ನರೇಂದ್ರ ಮೋದಿ ಅವರ ಒಟ್ಟಾರೇ ಆಸ್ತಿ ಮೌಲ್ಯ 2. 51 ಕೋಟಿ ರೂಪಾಯಿ ಆಗಿದೆ. ಇದರಲ್ಲಿ 1. 41 ಕೋಟಿ ರೂ. ಮೌಲ್ಯದ  ಚರಾಸ್ತಿ ಹೊಂದಿದ್ದರೆ, 1. 10 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1. 27 ಕೋಟಿ ರೂ. ಮೊತ್ತವನ್ನು  ಭದ್ರತಾ ಠೇವಣಿಯನ್ನಾಗಿಟ್ಟಿದ್ದಾರೆ.

2014ಕ್ಕೆ ಹೋಲಿಸಿದರೆ ಈ ಬಾರಿ ಚರಾಸ್ತಿ ಪ್ರಮಾಣದಲ್ಲಿ ಶೇ, 114.15 ರಷ್ಟು ಹೆಚ್ಚಳವಾಗಿದ್ದು,  65 ಲಕ್ಷದ 91 ಸಾವಿರದ 582 ರೂ. ಮೊತ್ತದ ಚರಾಸ್ತಿಯನ್ನು ಪ್ರಧಾನಿ ಹೊಂದಿದ್ದಾರೆ .

ಸರ್ಕಾರದಿಂದ ಬರುವ ವೇತನವೇ ನರೇಂದ್ರ ಮೋದಿ ಅವರ ಪ್ರಾಥಮಿಕ ಆದಾಯದ ಮೂಲವಾಗಿದ್ದು, ಉಳಿತಾಯದ ಮೇಲೆ ಬಡ್ಡಿ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೇ ಯಾವುದೇ ಕ್ರಿಮಿನಲ್ ಆರೋಪವನ್ನು ಎದುರಿಸುತ್ತಿಲ್ಲ ಎಂದು ಅಫಿಡವಿಟ್ ನಲ್ಲಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ 38, ಸಾವಿರದ 750 ರೂಪಾಯಿ ನಗದನ್ನು ಹೊಂದಿದ್ದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1. 27 ಕೋಟಿ ರೂ. ಮೊತ್ತದ ಭದ್ರತಾ ಠೇವಣಿಯನ್ನಿಟ್ಟಿದ್ದಾರೆ. 2014ರಲ್ಲಿ ಮೋದಿ  32 ಸಾವಿರದ 700 ರೂಪಾಯಿ ನಗದು,  26. 05 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ,ಹಾಗೂ 32. 48 ಲಕ್ಷವನ್ನು ಭದ್ರತಾ ಠೇವಣಿಯನ್ನಾಗಿ ಇಟ್ಟಿರುವುದಾಗಿ ಘೋಷಿಸಿಕೊಂಡಿದ್ದರು.

ನರೇಂದ್ರಮೋದಿ  1. 90 ಲಕ್ಷ ರೂಪಾಯಿ ಜೀವ ವಿಮೆ ಹೊಂದಿದ್ದರೆ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಗಳಿಂದ 7. 61 ಲಕ್ಷ ರೂಪಾಯಿ ಉಳಿತಾಯ ಮಾಡಿದ್ದಾರೆ. 1 ಲಕ್ಷದ 13 ಸಾವಿರದ 800 ರೂ. ಮೌಲ್ಯದ  45 ಗ್ರಾಮ್ ತೂಕದ ನಾಲ್ಕು ಚಿನ್ನದ ಉಂಗುರುಗಳನ್ನು ಪ್ರಧಾನಿ ಹೊಂದಿದ್ದಾರೆ.
ನರೇಂದ್ರ ಮೋದಿ ಬಳಿ ಒಟ್ಟಾರೇ,1. 10 ಕೋಟಿ ಮೊತ್ತದ ಸ್ಥಿರಾಸ್ತಿ ಹೊಂದಿದ್ದಾರೆ. 2014ಕ್ಕೆ ಹೋಲಿಸಿದರೆ ಇದರಲ್ಲಿ 10 ಲಕ್ಷ ರೂಪಾಯಿ ಹೆಚ್ಚಳವಾಗಿದೆ. ಗಾಂಧಿನಗರ ಸೆಕ್ಟರ್ 1 ರಲ್ಲಿ ಸ್ವಂತ  ಮನೆ ಹೊಂದಿರುವುದಾಗಿ ನರೇಂದ್ರ ಮೋದಿ ಅಫಿಡವಿಟ್ ನಲ್ಲಿ ಘೋಷಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ಜಶೋದಾಬೆನ್ ತನ್ನ ಪತ್ನಿ ಎಂದು ಹೇಳಿಕೊಂಡಿದ್ದು, ತಾವು ಗುಜರಾತ್ ವಿಶ್ವವಿದ್ಯಾಲಯದಿಂದ 1983ರಲ್ಲಿ ಎಂಎಂ ಪದವಿ ಪಡೆದಿರುವುದಾಗಿ ಅಫಿಡವಿಟ್ ಸಲ್ಲಿಸಿದ್ದಾರೆ.
1978ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, 1967ರಲ್ಲಿ ಎಸ್ಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದಾಗಿ ಪ್ರಧಾನಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com