ಲೋಕಸಭೆ ಚುನಾವಣೆಯಲ್ಲಿ ಎನ್ಡಿಎಗೆ 3/4ರಷ್ಟು ಸ್ಥಾನ ಖಚಿತ: ರಾಜನಾಥ್ ಸಿಂಗ್

ಈ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ದೇಶದಲ್ಲಿ 3/4ರಷ್ಟು ಬಹುಮತ ಪಡೆಯಲಿದೆ ಎಂದು ಕೇಂದ್ರ ಗೃಹ ಸಚಿವ, ಬಿಜೆಪಿ ಮುಖಂಡ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
ವಾರಣಾಸಿ: ಈ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ದೇಶದಲ್ಲಿ  3/4ರಷ್ಟು ಬಹುಮತ ಪಡೆಯಲಿದೆ ಎಂದು ಕೇಂದ್ರ ಗೃಹ ಸಚಿವ, ಬಿಜೆಪಿ ಮುಖಂಡ ರಾಜನಾಥ್ ಸಿಂಗ್ ಹೇಳಿದ್ದಾರೆ. ವಾರಣಾಸಿಯಲ್ಲಿನ ಎನ್ ಡಿಎ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
"ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಡೆಮಾಕ್ರಟಿಕ್ ಅಲೈಯನ್ಸ್ (ಎನ್ ಡಿಎ) ಮೂರನೇ ಎರಡರಷ್ಟು ಬಹುಮತ ಪಡೆಯಲಿದೆ " ಸಿಂಗ್ ಶುಕ್ರವಾರ ಹೇಳಿದ್ದಾರೆ.
ಎನ್ ಡಿಎ ಲೋಕಸಭೆಯಲ್ಲಿ ಸಂಪೂರ್ಣ ಬಹುಮತವನ್ನು ಹೊಂದಿದೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯ ನೇತೃತ್ವದಲ್ಲಿ ಮತ್ತೆ ಸರ್ಕಾರವನ್ನು ರೂಪಿಸಲಿದೆ ಜನರ ಉತ್ಸಾಹವೇ ಇದನ್ನು ಹೇಳುತ್ತಿದೆ ಎಂದು ಅಪ್ನಾ ದಳ (ಎಸ್) ಸಂಚಾಲಕ ಮತ್ತು ಕೇಂದ್ರ ಸಚಿವ ಅನುಪ್ರಿಯ ಪಟೇಲ್ ಹೇಳಿದ್ದಾರೆ
"ಎನ್ ಡಿಎ ಮತ್ತೆ ಅಧಿಕಾರಕ್ಕೆ ಬರುತ್ತದೆ, ನರೇಂದ್ರ ಮೋದಿಯ ನಾಯಕತ್ವ ಜನರಿಗೆ ಮೆಚ್ಚುಗೆಯಾಗಿದೆ. ನಿಸ್ಸಂದೇಹವಾಗಿ ಜನಸಾಮಾನ್ಯರು ಮೋದಿಜಿ ಅವರನ್ನೇ ಮತ್ತೆ ಪ್ರಧಾನಿಯಾಗಿ ಕಾಣಲು ಬಯಸಿದ್ದಾರೆ. ವಾರಣಾಸಿ ಬೀದಿಗಳಲ್ಲಿ ಜನರು ಮೋದಿಯವರಿಗೆ ನೀಡಿದ ಸ್ವಾಗತವೇ ಇದಕ್ಕೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಎಲ್ಲಾ ದಾಖಲೆಗಳನ್ನು  ನಾವು ಈ ಚುನಾವಣೆಯಲ್ಲಿ ಮುರಿಯುತ್ತೇವೆ" ಅವರು ಹೇಳಿದರು.
ಏತನ್ಮಧ್ಯೆ, ವಿದೇಶಾಂಗ ವ್ಯವಹಾರಗಳ ಸಚಿವೆ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ "ಭಾರತದ ಪ್ರಧಾನಮಂತ್ರಿಯನ್ನು ಆಯ್ಕೆ ಮಾಡುವ ವಾರಣಾಸಿಯ ಜನರು ಬಹಳ ಅದೃಷ್ಟಶಾಲಿಗಳು" ಎಂದಿದ್ದಾರೆ.
ವಾರಣಾಸಿ ಲೋಕಸಭೆ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಿದ್ದು ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಬಿಜೆಪಿ, ಎನ್ ಡಿಎ ಮತ್ತು ನಾರ್ತ್ ಈಸ್ಟ್ ಡೆಮಾಕ್ರಟಿಕ್ ಅಲಯನ್ಸ್ ನ ನಾಯಕರು ಪ್ರಧಾನಿ ನಾಮಪತ್ರ ಸಲ್ಲಿಸುವ ವೇಳೆ ಹಾಜರಿರಲಿದ್ದಾರೆ. ಬಿಜೆಪಿ ಕಾರ್ಯಕರ್ತರ ಜತೆಗಿನ ಸಮಾಲೋಚನೆ ಬಳಿಕ ಪ್ರಧಾನ ಮಂತ್ರಿ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ, ಬಿಜೆಪಿ ಕಾರ್ಯಕರ್ತರು ಪ್ರಧಾನಿಗಳ ಕಾರ್ಯಕ್ರಮದ ಅಂತಿಮ ಸಿದ್ದತೆಯಲ್ಲಿದ್ದಾರೆ. ಇದರಲ್ಲಿ ಪ್ರಧಾನ ಮಂತ್ರಿ ನಾಮಪತ್ರ ಸಲ್ಲಿಸುವುದರೊಡನೆ ಮತ್ತೊಂದು ರೋಡ್ ಶೋ ಸಹ ಇರಲಿದೆ. ಅಲ್ಲದೆ ಅವರು ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಡನೆ ಮಾತನಾಡುವ ಸಾಧ್ಯತೆ ಸಹ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com