ಕ್ಷಮೆ ಕೇಳಿದರೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಪರ ಪ್ರಚಾರಕ್ಕೆ ಸಿದ್ಧ: ಬಿಜೆಪಿ ನಾಯಕಿ ಫಾತಿಮಾ ರಸೂಲ್ ಸಿದ್ಧಿಕಿ

ಮುಸ್ಲಿಮ್ ಸಮುದಾಯದ ವಿರುದ್ಧ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಕ್ಷಮೆ ಕೇಳಿದರೆ ಕ್ಷೇತ್ರದಲ್ಲಿ ಅವರ ಪ್ರಚಾರ ಮಾಡಲು ಸಿದ್ಧ ಎಂದು ಬಿಜೆಪಿ ನಾಯಕಿ ಫಾತಿಮಾ ರಸೂಲ್ ಸಿದ್ಜಿಕಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಭೋಪಾಲ್: ಮುಸ್ಲಿಮ್ ಸಮುದಾಯದ ವಿರುದ್ಧ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಕ್ಷಮೆ ಕೇಳಿದರೆ ಕ್ಷೇತ್ರದಲ್ಲಿ ಅವರ ಪ್ರಚಾರ ಮಾಡಲು ಸಿದ್ಧ ಎಂದು ಬಿಜೆಪಿ ನಾಯಕಿ ಫಾತಿಮಾ ರಸೂಲ್ ಸಿದ್ಜಿಕಿ ಹೇಳಿದ್ದಾರೆ.
ಮಧ್ಯ ಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಈ ಹಿಂದೆ ಬಾಬ್ರಿ ಮಸೀದಿ ಧ್ವಂಸ ಕುರಿತಂತೆ ಹೇಳಿಕೆ ನೀಡಿದ್ದ ಪ್ರಗ್ಯಾ ಸಿಂಗ್ ಠಾಕೂರ್, ಬಾಬ್ರಿ ಮಸೀದಿ ಧ್ವಂಸಗೊಳಿಸಿದ್ದವರ ಪೈಕಿ ನಾನೂ ಕೂಡ ಇದ್ದೆ. ಆ ಬಗ್ಗೆ ನಮಗೆ ಹೆಮ್ಮೆ ಇದೆ. ಅದೇ ಜಾಗದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಇದೇ ಹೇಳಿಕೆ ಭೋಪಾಲ್ ನಲ್ಲಿ ಅಲ್ಪ ಸಮುದಾಯದ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೆ ಬಿಜೆಪಿಯ ಮುಸ್ಲಿಮ್ ಘಟಕ ಕೂಡ ಪ್ರಗ್ಯಾ ಸಿಂಗ್ ವಿರುದ್ಧ ಆಕ್ರೋಶಗೊಂಡಿತ್ತು. 
ಇದೇ ವಿಚಾರಕ್ಕೆ ಇಂದು ಮಾತನಾಡಿರುವ ಬಿಜೆಪಿ ನಾಯಕಿ ಫಾತಿಮಾ ರಸೂಲ್ ಸಿದ್ಧಿಕಿ, ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಮುಸ್ಲಿಂ ಸಮುದಾಯದ ಕ್ಷಮೆ ಕೇಳಿದರೆ ಅವರ ಪರ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಸಿದ್ಧ ಎಂದು ಹೇಳಿದ್ದಾರೆ.
'ನಾನು ಕೇಸರಿಯನ್ನು ಗೌರವಿಸುತ್ತೇನೆ. ಅಂತೆಯೇ ಸಾಧ್ವಿ ಕೂಡ ಹಿಜಬ್ ಅನ್ನು ಗೌರವಿಸಬೇಕು. ಒಂದು ವೇಳೆ ಅವರು ಹಿಜಬ್ ಅನ್ನು ಗೌರವಿಸುವುದಾದರೆ ಅವರು ಖಂಡಿತಾ ಮುಸ್ಲಿಮ್ ಸಮುದಾಯಕ್ಕೆ ಕ್ಷಮೆ ಕೇಳಬೇಕು. ಅವರು ಕ್ಷಮೆ ಕೇಳಿದರೆ ಖಂಡಿತಾ ನಾವು ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ಪರ ಪ್ರಚಾರ ನಡೆಸುತ್ತೇವೆ ಎಂದು ಹೇಳಿದ್ದಾರೆ.
'ಸಾಧ್ವಿ ಅವರ ಹೇಳಿಕೆ ಖಂಡಿತಾ ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡುತ್ತದೆ. ನಮ್ಮ ಧರ್ಮದ ವಿರುದ್ಧ ಯಾರಾದರೂ ಧರ್ಮ ಯುದ್ಥ ಹೇರಿದರೆ ಅವರ ಪರವಾಗಿ ನಾನು ಪ್ರಚಾರ ಮಾಡಲು ಹೇಗೆ ಸಾಧ್ಯ. ನಾವು ಪವಿತ್ರ ಎಂದು ಭಾವಿಸುವ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದು ತಾವೇ, ಆ ಬಗ್ಗೆ ತಮಗೆ ಹೆಮ್ಮೆ ಇದೆ ಎಂದು ಹೇಳಿದ್ದರು. ಇದು ನಮ್ಮ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯದಲ್ಲಿ ಶಿವರಾಜ್ ಸಿಂಗ್ ಚೌಹ್ವಾಣ್ ಬಗ್ಗೆ ರಾಜ್ಯ ಮುಸ್ಲಿಂ ಸಮುದಾಯಕ್ಕೆ ತುಂಬಾ ಗೌರವವಿದೆ. ಆದರೆ ಸಾಧ್ವಿ ಅವರ ಹೇಳಿಕೆಗಳು ಪಕ್ಷಕ್ಕೆ ಹಿನ್ನಡೆಯುಂಟು ಮಾಡುತ್ತದೆ ಎಂದು ಸಿದ್ಧಿಕಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com