ಮತದಾರರಿಗೆ ಭದ್ರತೆಗಿಂತ ಉದ್ಯೋಗ, ಆರ್ಥಿಕತೆಯೇ ಪ್ರಮುಖ ಚುನಾವಣಾ ವಿಷಯ!

ದೇಶದ ಮತದಾರರಿಗೆ ಭದ್ರತೆಗಿಂತ ಉದ್ಯೋಗ, ಆರ್ಥಿಕತೆಯೇ ಪ್ರಮುಖ ಚುನಾವಣಾ ವಿಷಯವಾಗಿದೆ ಎಂದು ತಿಳಿದುಬಂದಿದೆ.
ಮತದಾರರಿಗೆ ಜನತೆಗೆ ಭದ್ರತೆಗಿಂತ ಉದ್ಯೋಗ, ಆರ್ಥಿಕತೆಯೇ ಪ್ರಮುಖ ಚುನಾವಣಾ ವಿಷಯ!
ಮತದಾರರಿಗೆ ಜನತೆಗೆ ಭದ್ರತೆಗಿಂತ ಉದ್ಯೋಗ, ಆರ್ಥಿಕತೆಯೇ ಪ್ರಮುಖ ಚುನಾವಣಾ ವಿಷಯ!
ನವದೆಹಲಿ: ಲೋಕಸಭಾ ಚುನಾವಣೆಗೆ ಏ.29 ರಂದು 4 ನೇ ಹಂತದ ಮತದಾನ ನಡೆಯಲಿದೆ. ಈ ನಡುವೆ ಸಿ-ವೋಟರ್-ಐಎಎನ್ಎಸ್ ನಡೆಸಿದ ಸಮೀಕ್ಷೆಯಲ್ಲಿ ದೇಶದ ಮತದಾರರಿಗೆ ಭದ್ರತೆಗಿಂತ ಉದ್ಯೋಗ, ಆರ್ಥಿಕತೆಯೇ ಪ್ರಮುಖ ಚುನಾವಣಾ ವಿಷಯವಾಗಿದೆ ಎಂದು ತಿಳಿದುಬಂದಿದೆ. 
ಏ.26 ರಂದು ನಡೆದಿರುವ ಸಮೀಕ್ಷೆಯಲ್ಲಿ ಮತರಾರರು ನಿರುದ್ಯೋಗ ವಿಷಯಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಬಹಿರಂಗಗೊಂಡಿದೆ. ಅರ್ಥಿಕತೆಯ ವಿಷಯ ದೇಶದಲ್ಲಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು ಎಂದು ಶೇ.57.04 ರಷ್ಟು ಮಂದಿ ಹೇಳಿದ್ದರೆ ಶೇ.11.74 ರಷ್ಟು ಮಂದಿ ಭದ್ರತೆ ದೇಶದಲ್ಲಿ ಅತ್ಯಂತ ಕಾಳಜಿ ವಹಿಸಬೇಕಾದ ಅಂಶ ಎಂದು ಹೇಳಿದ್ದಾರೆ. 
ಚುನಾವಣೆ ಪ್ರಾರಂಭವಾಗುವುದಕ್ಕಿಂತಲೂ ಮುನ್ನ ನಿರುದ್ಯೋಗ ಸಮಸ್ಯೆಯೇ ಚುನಾವಣಾ ವಿಷಯವಾಗಿತ್ತು. ಈ ಟ್ರೆಂಡ್ ಚುನಾವಣೆ ಪ್ರಾರಂಭವಾಗಿ 4 ನೇ ಹಂತದ ಮತದಾನದ ವೇಳೆಯಲ್ಲಿಯೂ ಪ್ರಮುಖ ಚುನಾವಣಾ ವಿಷಯವಾಗಿ ಮುಂದುವರೆದಿದೆ. ಆದರೆ ಮಾರ್ಚ್ ತಿಂಗಳಲ್ಲಿ ಮಾತ್ರ ದೇಶದ ಜನತೆ ಭದ್ರತೆಯನ್ನು ಅತ್ಯಂತ ಪ್ರಮುಖ ವಿಷಯ ಎಂದು ಪರಿಗಣಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com