ವಿಪಕ್ಷಗಳಿಗೆ ತಪ್ಪು ತಿಳುವಳಿಕೆಯಾಗಿದ್ದು, ಅದು 'ಬಿಜೆಪಿ' ಅಕ್ಷರ ಅಲ್ಲ: ಚುನಾವಣಾ ಆಯೋಗ ಸ್ಪಷ್ಟನೆ

ಮತಯಂತ್ರದಲ್ಲಿ ಕಮಲದ ಚಿನ್ಹೆ ಕೆಳಗೆ ಬಿಜೆಪಿ ಎಂಬ ಅಕ್ಷರ ಇದೆ ಎಂಬ ವಿಪಕ್ಷಗಳ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದು, ವಿಪಕ್ಷಗಳಿಗೆ ತಪ್ಪು ತಿಳುವಳಿಕೆಯಾಗಿದ್ದು, ಅದು 'ಬಿಜೆಪಿ' ಅಕ್ಷರ ಅಲ್ಲ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಲ್ಕತಾ: ಮತಯಂತ್ರದಲ್ಲಿ ಕಮಲದ ಚಿನ್ಹೆ ಕೆಳಗೆ ಬಿಜೆಪಿ ಎಂಬ ಅಕ್ಷರ ಇದೆ ಎಂಬ ವಿಪಕ್ಷಗಳ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದು, ವಿಪಕ್ಷಗಳಿಗೆ ತಪ್ಪು ತಿಳುವಳಿಕೆಯಾಗಿದ್ದು, ಅದು 'ಬಿಜೆಪಿ' ಅಕ್ಷರ ಅಲ್ಲ ಎಂದು ಹೇಳಿದೆ.
ಈ ಬಗ್ಗೆ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು, 'ಬಿಜೆಪಿ ಚಿಹ್ನೆ ಕೆಳಗೆ ಪಕ್ಷದ ಹೆಸರು ಇಲ್ಲ. ವಿಪಕ್ಷಗಳು ತಪ್ಪಾಗಿ ಅರ್ಥೈಸಿಕೊಂಡಿವೆ ಎಂದು ಹೇಳಿದ್ದಾರೆ.
'ಈ ಹಿಂದೆ ಮತಯಂತ್ರಗಳಲ್ಲಿ ತಮ್ಮ ಪಕ್ಷದ ಚಿಹ್ನೆಯ ಔಟ್‌ ಲೈನ್ ತುಂಬಾ ತೆಳುವಾಗಿದ್ದು ಅದನ್ನು ದಪ್ಪ ಮಾಡಲು ಅವಕಾಶ ನೀಡಬೇಕೆಂದು 2013ರ ಮಧ್ಯಾವಧಿಯಲ್ಲಿ ಬಿಜೆಪಿ ಚುನಾವಣಾ ಆಯೋಗದ ಮೊರೆ ಹೋಗಿತ್ತು. ಈ ವಿನಂತಿ ಮೇರೆಗೆ ಔಟ್ ಲೈನ್‌ನ್ನು ದಪ್ಪ ಮಾಡಿ, ಕಮಲದ ಚಿಹ್ನೆ ಕಳಗೆ ನೀರು ತೋರಿಸುವಂತೆ ಚಿತ್ರಿಸಲಾಯಿತು. ಕಮಲದ ಚಿಹ್ನೆ ಕೆಳಗಿರುವ ನೀರಿನ ಚಿತ್ರ ಇಂಗ್ಲಿಷ್ ಅಕ್ಷರ್ ಎಫ್ ಮತ್ತು ಪಿ ಯಂತೆ ಕಾಣುತ್ತದೆ. ಅದು ಬಿಜೆಪಿ ಎಂದು ಬರೆದಿಲ್ಲ. 2014ರಿಂದಲೇ ಬಿಜೆಪಿಯ ಚಿಹ್ನೆ ಹೀಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. 
ಅಲ್ಲದೆ ಇವಿಎಂಗಳನ್ನು ಬದಲಿಸುವುದಿಲ್ಲ ಎಂದೂ ಆಯೋಗ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com