ದೀದಿ ಕಳಿಸುವ ಮಣ್ಣಿನ ರಸಗುಲ್ಲಾನ ಪ್ರಸಾದದಂತೆ ಸ್ವೀಕರಿಸುತ್ತೇನೆ: ಮೋದಿ

ದೀದಿ ಕಳಿಸುವ ಮಣ್ಣಿನ ರಸಗುಲ್ಲಾನ ಪ್ರಸಾದದಂತೆ ಸ್ವೀಕರಿಸುತ್ತೇನೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ದೀದಿ  ಕಳಿಸುವ ಮಣ್ಣಿನ ರಸಗುಲ್ಲಾನ ಪ್ರಸಾದದಂತೆ ಸ್ವೀಕರಿಸುತ್ತೇನೆ: ಮೋದಿ
ದೀದಿ ಕಳಿಸುವ ಮಣ್ಣಿನ ರಸಗುಲ್ಲಾನ ಪ್ರಸಾದದಂತೆ ಸ್ವೀಕರಿಸುತ್ತೇನೆ: ಮೋದಿ
ನವದೆಹಲಿ: ದೀದಿ ಕಳಿಸುವ ಮಣ್ಣಿನ ರಸಗುಲ್ಲಾನ ಪ್ರಸಾದದಂತೆ ಸ್ವೀಕರಿಸುತ್ತೇನೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. 
ಅಕ್ಷಯ್ ಕುಮಾರ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ತಮಗೆ ಮಮತಾ ಬ್ಯಾನರ್ಜಿ ಅವರು ಪ್ರತೀ ವರ್ಷ ಕುರ್ತಾ ಮತ್ತು ಸಿಹಿಯನ್ನ ಕಳುಹಿಸುತ್ತಾರೆ ಎಂದು ಹೇಳಿದ್ದರು. ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಂಡಿದ್ದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಮಮತಾ ಬ್ಯಾನರ್ಜಿ ಮೋದಿಗೆ ಜೇಡಿಮಣ್ಣು ಮತ್ತು ಕಲ್ಲುಗಳಿರುವ ರಸಗುಲ್ಲಾಗಳನ್ನ ಕೊಡುತ್ತೇವೆ ಎಂದು ಹೇಳಿದ್ದರು. ಈ ರಸಗುಲ್ಲಾ ತಿಂದು ಮೋದಿಯ ಎಲ್ಲಾ ಹಲ್ಲುಗಳೂ ಉದುರಿಹೋಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 
ಮಮತಾ ಬ್ಯಾನರ್ಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ದೀದಿ ಕಳಿಸುವ ಮಣ್ಣಿನ ರಸಗುಲ್ಲಾನ ಪ್ರಸಾದದಂತೆ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ. 
ಬಂಗಾಳ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಜೆಸಿ ಬೋಸ್, ನೇತಾಜಿ ಸುಭಾಶ್ ಚಂದ್ರ ಬೋಸ್, ಎಸ್ ಪಿ ಮುಖರ್ಜಿ ಅಂತಹ ಪೂಜ್ಯರು ಜನಿಸಿದ ನಾಡಿನ ಮಣ್ಣು, ಇಂಥಹ ಮಣ್ಣಿನಿಂದ ಮಾಡಿದ ರಸಗುಲ್ಲಾಗಳನ್ನು ಪಡೆಯುವುದು ನನ್ನ ಭಾಗ್ಯ, ಅದನ್ನು ನಾನು  ಪ್ರಸಾದದಂತೆ ಸ್ವೀಕರಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com