ಲೋಕಸಭಾ ಚುನಾವಣೆ:ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಅನಂತ್ ನಾಗ್ ಕ್ಷೇತ್ರದಿಂದ ಸ್ಪರ್ಧೆ

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬ ಫ್ತಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಅನಂತ್ ನಾಗ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಮೆಹಬೂಬ ಮುಫ್ತಿ
ಮೆಹಬೂಬ ಮುಫ್ತಿ
ಶ್ರೀನಗರ: ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ  ಮೆಹಬೂಬ ಫ್ತಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಅನಂತ್ ನಾಗ್  ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 
ಇದೇ ವೇಳೆ ರಾಜ್ಯದ ಉಧಂಪುರ್ ಹಾಗೂ ಜಮ್ಮು ಕ್ಷೇತ್ರದಿಂದ ಯಾವುದೇ  ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದೆಂದು ಪಕ್ಷ ನಿರ್ಧಾರ ತೆಗೆದುಕೊಂಡಿದೆ.
ಜಮ್ಮು ಕಾಶ್ಮೀರ ಮಾಜಿ  ಮುಖ್ಯಮಂತ್ರಿ  ಮುಂಬರುವ ಸಂಸದೀಯ ಚುನಾವಣೆಯಲ್ಲಿ ದಕ್ಷಿಣ ಕಾಶ್ಮೀರ ಭಾಗದಿಂದ ಸ್ಪರ್ಧಿಸುತ್ತಿರುವುದಾಗಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಮುಫ್ತಿ ಈ ಹಿಂದೆ  2004 ರಿಂದ 2009 ಮತ್ತು 2014 ರಿಂದ 2018 ಎರಡು ಅವಧಿಯಲ್ಲಿ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಇನ್ನು ಬಾರಾಮುಲ್ಲಾ ಕ್ಷೇತ್ರದಿಂದ ಪಕ್ಷವು ಕಯೂಮ್ ವಾನಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದು ರಾಜ್ಯದ ಆರು ಲೋಕಸಭೆ ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಪ್ರಕಟಣೆ ಹೇಳಿದೆ. ಅಲ್ಲದೆ ಕಾಂಗ್ರೆಸ್ ಜತೆ ಚುನಾವಣಾಪೂರ್ವ ಮೈತ್ರಿ ಕುರಿತ ಎಲ್ಲಾ ಊಹಾಪೋಹವನ್ನು ಪಿಡಿಪಿ ತಳ್ಳಿ ಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com