ಕಾಂಗ್ರೆಸ್ ಪಕ್ಷ 'ಅಝರ್ ಮಸೂದ್ ನ ಅಳಿಯ'ನಿಗೆ ಟಿಕೆಟ್ ನೀಡಿದೆ: ಯೋಗಿ ಆದಿತ್ಯನಾಥ್

ಪ್ರತಿಪಕ್ಷಗಳು ಉಗ್ರವಾದಿಗಳಿಗೆ ಬಿರಿಯಾನಿ ನೀಡಿದ್ದರೆ ಮೋದಿ ಸರ್ಕಾರ ಭಯೋತ್ಪಾದಕರಿಗೆ ಗುಂಡೇಟಿನ ರುಚಿ ತೋರಿಸಿದೆ. ಪ್ರತಿಪಕ್ಷ ಮಾತ್ರ ಉಗ್ರ ಮಸೂದ್ ಅಝರ್ ಅಳಿಯನನ್ನೇ ಲೋಕಸಭೆಗೆ ಕಳಿಸಲು ಮುಂದಾಗಿದೆ.
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
ಲಖನೌ:  ಪ್ರತಿಪಕ್ಷಗಳು ಉಗ್ರವಾದಿಗಳಿಗೆ ಬಿರಿಯಾನಿ ನೀಡಿದ್ದರೆ ಮೋದಿ ಸರ್ಕಾರ ಭಯೋತ್ಪಾದಕರಿಗೆ ಗುಂಡೇಟಿನ ರುಚಿ ತೋರಿಸಿದೆ. ಪ್ರತಿಪಕ್ಷ ಮಾತ್ರ ಉಗ್ರ ಮಸೂದ್ ಅಝರ್ ಅಳಿಯನನ್ನೇ ಲೋಕಸಭೆಗೆ ಕಳಿಸಲು ಮುಂದಾಗಿದೆ. ಸಹರಾಂಪುರ್ ಕ್ಷೇತ್ರದಿಂದ ಉಗ್ರ ಮಸೂದ್ ಅಳಿಯನೇ ಕ್ಕಣಕ್ಕಿಳಿಯುತ್ತಿದ್ದಾರೆ. ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಸಹರಾಂಪುರ್ ನಲ್ಲಿ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಯೋಗಿ ಆದಿತ್ಯನಾಥ್  "ಜೈನ್-ಎ-ಮೊಹಮ್ಮದ್ ಮುಖ್ಯಸ್ಥ ಅಝರ್ ಮಸೂದ್" ಅಳಿಯ ಲೋಕಸಭೆ ಕಣಕ್ಕೆ ಇಳಿದಿದ್ದಾನೆ, ಆತ  ಭಯೋತ್ಪಾದಕ ಸರ್ಕಾರದ ಭಾಷೆ  ಮಾತನಾಡತೊಡಗಿದ್ದಾನೆ ಎಂದರು.
ಸಹರಾಂಪುರ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಮ್ರಾನ್ ಮಸೂದ್ ಕಣದಲ್ಲಿದ್ದಾರೆ.
"ಲೋಕಸಭೆ ಚುನಾವಣೆಯಲ್ಲಿ ಅಝರ್ ಮಸೂದ್ ಭಾಷೆಯನ್ನು ಮಾತನಾಡುವ ಅಭ್ಯರ್ಥಿಯನ್ನು ನೀವು ಸೋಲಿಸಬೇಕು" ಯೋಗಿ ಹೇಳಿದ್ದಾರೆ. ಸಹರಾಂಪುರ್ ಲೋಕಸಭೆ ಕಣದಲ್ಲಿ ರಾಘವ್ ಲಖನ್ ಪಾಲ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಅಝರ್ ಸಹ ಒಸಾಮಾ ಬಿನ್ ಲಾಡನ್ ಸ್ಥಿತಿಯನ್ನೇ ಪಡೆಯುತ್ತಾನೆ ಎಂದು ಯೋಗಿ ಹೇಳೀದ್ದು "ನೀವು ಒಸಾಮಾ ಬಿನ್ ಲಾಡೆನ್ ಬಗ್ಗೆ ಕೇಳಿರಬಹುದು, ಅವರು ಕ್ರೂರವಾಗಿ ಕೊಲ್ಲಲ್ಪಟ್ಟರು, ಅಝರ್ ಮಸೂದ್ ಸಹ ಅದೇ ರೀತಿ ಕೊಲ್ಲಲ್ಪಡಲಿದ್ದಾನೆ."
ಬಿಜೆಪಿಯು ರಾಷ್ಟ್ರನಿರ್ಮಾಣಕ್ಕೆ ಬದ್ದವಾಗಿದೆ.ಭಾರತಕ್ಕೆ ದ್ರೋಹವೆಸಗುವ ಯಾವುದೇ ವಿದ್ರೋಹಿಗಳನ್ನು ಸುಮ್ಮನೆ ಬಿಡುವುದಿಲ್ಲ.ಎಂದು ಯುಪಿ ಮುಖ್ಯಮಂತ್ರಿ ಹೇಳಿದರು.
"ಕೆಲವು ಪಕ್ಷಗಳು ಭಯೋತ್ಪಾದಕರಿಗೆ ಬಿರಿಯಾನಿ ನೀಡಿತು, ಆದರೆ ಮೋದಿ ಸರಕಾರವು ಭಯೋತ್ಪಾದಕರಿಗೆ ಒಂದೇ ಔಷಧಿಯನ್ನು ಮಾತ್ರ ಕೊಟ್ಟಿದೆ, ಅದುವೇ ಗುಂಡಿನ ಏಟು." ಅವರು ಹೇಳೀದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com