ಆಮ್ ಆದ್ಮಿ-ಕಾಂಗ್ರೆಸ್ ಮೈತ್ರಿ ಕುರಿತ ನಿರ್ಧಾರದ ಹೊಣೆ ರಾಹುಲ್ ಗಾಂಧಿ ಹೆಗಲಿಗೆ!

ದೆಹಲಿಯಲ್ಲಿ ಲೋಕಸಭಾ ಚುನವಾಣೆಗೆ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಾಯಕರು ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸಿದ್ದಾರೆ.
ಆಮ್ ಆದ್ಮಿ-ಕಾಂಗ್ರೆಸ್ ಮೈತ್ರಿ ಕುರಿತ ನಿರ್ಧಾರದ ಹೊಣೆ ರಾಹುಲ್ ಗಾಂಧಿ ಹೆಗಲಿಗೆ!
ಆಮ್ ಆದ್ಮಿ-ಕಾಂಗ್ರೆಸ್ ಮೈತ್ರಿ ಕುರಿತ ನಿರ್ಧಾರದ ಹೊಣೆ ರಾಹುಲ್ ಗಾಂಧಿ ಹೆಗಲಿಗೆ!
ನವದೆಹಲಿ: ದೆಹಲಿಯಲ್ಲಿ ಲೋಕಸಭಾ ಚುನವಾಣೆಗೆ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಾಯಕರು ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸಿದ್ದಾರೆ. 
ಮೈತ್ರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಸಭೆಯಲ್ಲಿ ಒಮ್ಮತ ಮೂಡಿಲ್ಲ. ಆಪ್ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅಂತಿಮ ನಿರ್ಧಾರ ಕೈಗೊಳ್ಳಬೇಕೆಂಬ ಅಭಿಪ್ರಾಯ ಸ್ಥಳೀಯ ನಾಯಕರಿಂದ ವ್ಯಕ್ತವಾಗಿದೆ. 
ಮೂಲಗಳ ಪ್ರಕಾರ ಅಜಯ್ ಮಕೇನ್, ಸುಭಾಶ್ ಚೋಪ್ರಾ, ತಾಜ್ದರ್ ಬಾಬರ್, ಅರ್ವಿಂದರ್ ಸಿಂಗ್ ಆಮ್ ಆದ್ಮಿ ಪಕ್ಷದ ಜೊತೆ ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದಾರೆ. ಮೈತ್ರಿಗೆ ಪರವಾಗಿರುವ ನಾಯಕರ ಸಹಿಯುಳ್ಳ ಪತ್ರವನ್ನು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಗೆ ಹಸ್ತಾಂತರಿಸಿದ್ದಾರೆ. 
ಆದರೆ ದೆಹಲಿ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್ ಹಾಗೂ ಇತರ ಮೂವರು ಕಾರ್ಯಾಧ್ಯಕ್ಷರುಗಳು ಆಮ್ ಆದ್ಮಿ ಜೊತೆಗಿನ ಮೈತ್ರಿ ವಿರುದ್ಧವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಒಮ್ಮತ ಮೂಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ದೆಹಲಿ ಕಾಂಗ್ರೆಸ್ ಅಂತಿಮ ನಿರ್ಧಾರ ಕೈಗೊಳ್ಳುವ ಹೊಣೆಯನ್ನು ರಾಹುಲ್ ಗಾಂಧಿ ಹೆಗಲಿಗೇರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com