ಲೋಕಸಭೆಗೆ ಕಮಲ್ ಹಾಸನ್ ಸ್ಪರ್ಧೆ ಇಲ್ಲ!

ನಟ, ರಾಜಕಾರಣಿ, ಮಕ್ಕಳ್ ನಿಧಿ ಮೈಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ
ಕಮಲ್ ಹಾಸನ್
ಕಮಲ್ ಹಾಸನ್
ಕೊಯಮತ್ತೂರ್: ನಟ, ರಾಜಕಾರಣಿ, ಮಕ್ಕಳ್ ನಿಧಿ ಮೈಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ  ಲೋಕಸಭೆ ಚುನಾವಣೆಗಾಗಿ ಪಕ್ಷದ ಎರಡನೇ ಹಾಗೂ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಕಮಲ್ ಹಾಸನ್ ಹೆಸರಿಲ್ಲ. ಅಲ್ಲದೆ ತಮಿಳುನಾಡಿನ 18 ವಿಧಾನಸಭೆ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆ ಅಭ್ಯರ್ಥಿಯ ಪಟ್ಟಿಯಲ್ಲಿಯೂ ಅವರ ಹೆಸರನ್ನು ಸೇರಿಸಿಲ್ಲ.
ಭಾನುವಾರ ರಾತ್ರಿ ಭಾರೀ ಸಾರ್ವಜನಿಕ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಕಮಲ್ ಹಾಸನ್ ಹೆಚ್ಚಿನ ಪ್ರಮಾಣದಲ್ಲಿ ನಾಮನಿರ್ದೇಶನ ಬೇಡಿಕೆಗಳಿದ್ದ ಕಾರಣ ತನ್ನ ಹೆಸರನ್ನು ಪಟ್ಟಿಯಲ್ಲಿ ಸೇರಿಸಿಲ್ಲ ಎಂದರು. ಅಲ್ಲದೆ ಪಕ್ಷದ ಪ್ರತಿಯೊಬ್ಬ ಅಭ್ಯರ್ಥಿಯೂ ಸಹ ತಮ್ಮ ಕಾರ್ಯ ಸಿದ್ದಾಂತವನ್ನೇ ಅನುಸರಿಸುವ ಕಾರಣ ಯಾವ ಚಿಂತೆಗೆ ಅವಕಾಶವಿಲ್ಲ ಎಂದು ರಾಜಕಾರಣಿಯಾಗಿ ಬದಲಾದ ನಟಹೇಳಿದ್ದಾರೆ.
ನಮ್ಮ ಪಕ್ಷದಿಂದ ಆರಿಸಿ ಬರುವ ಎಲ್ಲಾ ವಿಜೇತ ಸಂಸದರು ತಾವು ನೀಡಿದ ಭರವಸೆಯನ್ನು ಈಡೇರಿಸಲಿದ್ದಾರೆ.ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ ಕಮಲ್ ಹಾಗೊಂದು ವೇಳೆ ಅವರು ತಾವಿತ್ತ ಭರವಸೆ ಈಡೇರಿಸಿಲ್ಲ ಎನ್ನುವುದು ಸಾಬೀತಾದರೆ ಅವರನ್ನು ಕಿತ್ತು ಹಾಕಲಾಗುತ್ತದೆ ಎಂದೂ ಹೇಳಿದ್ದಾರೆ. ಪ್ರತಿ ಸಂಸದರ ವಿರುದ್ಧವೂ ಸಮಿತಿಯೊಂದರ ಮೂಲಕ ದೂರು, ಸಲಹೆಗಳನ್ನು ಸ್ವೀಕರಿಸಲಾಗುವುದು. ಹಾಗೊಂದು ವೇಳೆ ಪಕ್ಷದ ಅಭ್ಯರ್ಥಿ ತಪ್ಪಿತಸ್ಥ ಎಂದು ಖಚಿತವಾದರೆ ತಕ್ಷಣ ತಮ್ಮ ರಾಜೀನಾಮೆ ಸಲ್ಲಿಸುವಂತೆ ಕೇಳಲಾಗುವುದು ಎಂದು ಹಾಸನ್ ಹೇಳಿದರು.
ಕುಡಿಯುವ ನೀರಿನ ಸಮಸ್ಯೆಗೆ  ಶಾಶ್ವತವಾಗಿ ಪರಿಹಾರ,, ರಾಜ್ಯದಿಂದ ಬಡತನವನ್ನು ಅಳಿಸಿಹಾಕುವ ಭರವಸೆ ನೀಡುವ ಎಂಎನ್ಎಂ  ಸ್ಲಂ-ಮುಕ್ತ ತಮಿಳುನಾಡು, ಮಹಿಳಾ ಕಾರ್ಮಿಕರಿಗೆ ಸಮಾನವಾದ ವೇತನ ಖಾತ್ರಿ ಮಾಡುವುದಾಗಿ ಹೇಳಿದೆ.
ವಿಶ್ವದಾದ್ಯಂತ ಇರುವ ತಮಿಳು ವಲಸಿಗರು ಈ ಚುನಾವಣೆಗಳಲ್ಲಿ ಭಾಗವಹಿಸಿ ತಮಗೆ ಬೆಂಬಲಿಸಬೇಕೆಂದು ಅವರು ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com