ಭಾರತ ಮಾತೆ ಯೋಗಿ ಆದಿತ್ಯನಾಥ್ ಒಬ್ಬರಿಗೇ ಸೇರಿದ್ದಲ್ಲ,ನಮಗೂ ಸೇರಿದ್ದು: ಇಮ್ರಾನ್ ಮಸೂದ್

ಜೈಷ್ -ಇ- ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಝರ್ ಅಳಿಯ ಶಹರನ್ ಪುರದಲ್ಲಿರುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿರುವ ಹೇಳಿಕೆ ದುರದೃಷ್ಟಕರವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಹೇಳಿದ್ದಾರೆ.
ಇಮ್ರಾನ್ ಮಸೂದ್
ಇಮ್ರಾನ್ ಮಸೂದ್

ಶಹರನ್ ಪುರ: ಜೈಷ್ -ಇ- ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಝರ್ ಅಳಿಯ ಶಹರನ್ ಪುರದಲ್ಲಿರುವುದಾಗಿ ಉತ್ತರ  ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿರುವ ಹೇಳಿಕೆ ದುರದೃಷ್ಟಕರವಾಗಿದೆ ಎಂದು  ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್  ಮಸೂದ್ ಹೇಳಿದ್ದಾರೆ.

ಕೆಲವರ ದೇಶಭಕ್ತಿಯನ್ನು ಪ್ರಶ್ನಿಸಬಾರದು ಒಂದು ವೇಳೆ  ದೇಶಕ್ಕೆ ನನ್ನ ತಲೆ  ಅಗತ್ಯವಾದರೆ ಅದನ್ನು ಆರ್ಪಿಸುತ್ತೇನೆ. ಭಾರತ ಮಾತೆ ಯೋಗಿ ಆದಿತ್ಯನಾಥ್ ಒಬ್ಬರಿಗೇ ಸೇರಿದ್ದಲ್ಲ, ನಮಗೂ ಸೇರಿದ್ದು ಎಂದಿದ್ದಾರೆ.

ಶಹರನ್ ಪುರದಲ್ಲಿ ಚುನಾವಣಾ ಪ್ರಚಾರಕ್ಕೆ ಭಾನುವಾರ ಚಾಲನೆ ನೀಡಿ  ಮಾತನಾಡಿದ್ದ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ಅಭ್ಯರ್ಥಿಗೆ ಪಾಕಿಸ್ತಾನದ ಅಭ್ಯರ್ಥಿ ಮಸೂದ್ ಅಝರ್  ಜೊತೆಗೆ ನಂಟಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್  ಬಿಜೆಪಿಯ ಹಾಲಿ ಸಂಸದ ರಾಘವ್ ಲಾಕಾನ್ ಪಾಲ್ ಗಿಂತಲೂ  ಪ್ರಬಲ ನಾಯಕರಾಗಿದ್ದಾರೆ. ಏಪ್ರಿಲ್ 11 ರಂದು ಈ ಕ್ಷೇತ್ರದ ಲೋಕಸಭಾ ಚುನಾವಣೆ ನಡೆಯಲಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com