ಸದ್ಯಕ್ಕೆ ವಿಶ್ರಾಂತಿ ತೆಗೆದುಕೊಂಡಿದ್ದೇನೆ, ಇನ್ನೂ 20 ವರ್ಷಗಳ ರಾಜಕೀಯ ಜೀವನ ಬಾಕಿಯಿದೆ: ಉಮಾ ಭಾರತಿ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ ಆಡ್ವಾಣಿ ಅವರು ಸ್ಪರ್ಧಿಸುತ್ತಿಲ್ಲ, ಇದರಿಂದ ಅವರ ಸ್ಥಾನಮಾನದ ಮೇಲೆ ಯಾವುದೇ ...
ಉಮಾ ಭಾರತಿ
ಉಮಾ ಭಾರತಿ
ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕ  ಎಲ್.ಕೆ ಆಡ್ವಾಣಿ ಅವರು ಸ್ಪರ್ಧಿಸುತ್ತಿಲ್ಲ, ಇದರಿಂದ ಅವರ ಸ್ಥಾನಮಾನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಹೇಳಿರುವ ಮಾಜಿ ಸಚಿವೆ ಉಮಾ ಭಾರತಿ, ಸದ್ಯಕ್ಕೆ ತಾವು ವಿಶ್ರಾಂತಿ ಪಡೆಯುತ್ತಿದ್ದೇನೆ, ರಾಜಕೀಯ ನಿವೃತ್ತಿ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಪ್ರ: ಎಲ್.ಕೆ ಆಡ್ವಾಣಿ ಸ್ಪರ್ಧಿಸುತ್ತಿಲ್ಲ, ಇದರ ಬಗ್ಗೆ ತಮ್ಮ ಅನಿಸಿಕೆ?
ಈ ಹಿಂದೆಯು ಹಲವು ಬಾರಿ ಎಲ್,ಕೆ ಆಡ್ವಾಣಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ, 1995 ರಲ್ಲಿ  ಮುಂಬಯಿಯಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಯಿತು, ಆಗ ಅಡ್ವಾಣಿ ಕೂಡ ಸ್ಪರ್ಧಿಯಾಗಿದ್ದರು, ಚುನಾವಣೆಯಲ್ಲಿ ಸ್ಪರ್ಧಿಸಲಿ, ಬಿಡಲಿ ಅದು ಅವರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಆದರೆ ಅಮಿತ್ ಶಾ ಏಕೆ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ತಿಳಿದಿಲ್ಲ.
ಪ್ರ: ಚುನಾವಣೆಗೆ ನೀವು ಸ್ಪರ್ಧಿಸದಿರಲು ಕಾರಣವೇನು?
ಈ ಬಾರಿ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ, 2024ರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪಕ್ಷದ ಹಿರಿಯ ನಾಯಕರಿಗೆ ತಿಳಿಸಿದ್ದೇನೆ, ನನಗೆ ಈಗ 59 ವರ್ಷ ಇನ್ನೂ 15-20 ವರ್ಷ ರಾಜಕೀಯ ಜೀವನವಿದೆ.,ಚುನಾವಣೆ ಪ್ರಚಾರ ಮುಗಿದ ಬಳಿಕ ಮುಂದಿನ ಒಂದೂವರೆ ವರ್ಷಗಳ ಕಾಲ ಗಂಗಾ ಯಾತ್ರೆ ಮಾಡುತ್ತೇನೆ, 2016 ರಲ್ಲಿ ನಾನು ಸಂಪುಟದಿಂದ ಹೊರಬಂದೆ, ಪಕ್ಷಕ್ಕೆ ನಾನು ಯಾವತ್ತೂ ಋಣಿಯಾಗಿರುತ್ತೇನೆ, ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು ಯಾವುದಕ್ಕೂ ಅಂಟಿ ಕೊಂಡು ಕುಳಿತಿಲ್ಲ,
ಪ್ರ: ಗಂಗಾ ಶುದ್ದೀಕರಣಕ್ಕೆ ನಿಮ್ಮ ಯೋಜನೆ ಏನು?
ನಾನು ಗಂಗಾನದಿ ಶುದ್ದೀಕರಣ ಸಚಿವೆಯಾಗಿದ್ದಾಗ ಎಲ್ಲಾ ರೀತಿಯ ಕೆಲಸಗಳು ನಡೆದಿದ್ದವು, ನಿತಿನ್ ಗಡ್ಕರಿ ಅದನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದಾರೆ, ಅರ್ದದಷ್ಟು ಕೆಲಸ ಮುಗಿದಿದೆ,  ಜನರಿಗೆ ಶುಚಿತ್ವದ ಅರಿವು ಮೂಡಿಸಿ ಉಳಿದ ಕೆಲಸ ಮಾಡಬೇಕಿದೆ. 
ಪ್ರ: ನಿಮ್ಮ ಮುಂದಿನ ಯೋಜನೆ ಏನು?
ಸದ್ಯದ ನನ್ನ ಮೊದಲ ಆದ್ಯತೆ 30 ಕೆಜಿ ತೂಕ ಇಳಿಸುವುದು, ಇತ್ತೀಚೆಗೆ ನನ್ನ ಆರೋಗ್ಯದ ಕಡೆ ಗಮನ ಹರಿಸುವುದರಲ್ಲಿ ನಿರ್ಲಕ್ಷ್ಯ ವಹಿಸಿದ್ದೇನೆ, ತೂಕ ಮತ್ತು ಒತ್ತಡ ಕಳೆದು ಕೊಳ್ಳುವುದ್ ನನ್ನ ಮುಂದಿನ ಯೋಜನೆ
ಪ್ರ: ಉತ್ತರ ಪ್ರದೇಶದಲ್ಲಿ ಎಸ್ ಪಿ- ಬಿಎಸ್ ಪಿ ಮೈತ್ರಿ ಹೇಗೆ ಪರಿಣಾಮ ಬೀರಲಿದೆ?
ಬಿಎಸ್ಪಿ-ಎಸ್ ಪಿ ಮತದಾರರಿಗೆ ಈ ಮೈತ್ರಿ ಇಷ್ಟವಿಲ್ಲ,  ಬಿಎಸ್ ಪಿ ಬೆಂಬಲಿಗರು ಏಕೆ ಎಸ್ ಪಿ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆ, ಎಸ್ ಪಿ ಬಿಎಸ್ ಪಿ ಮಾಡಿದ ಮಿಸ್ಟೇಕ್ ಬಿಜೆಪಿಗೆ ಲಾಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com