ರಾಹುಲ್ ಗಾಂಧಿ ನೈಜ ಬೆಂಬಲಿಗರು ಪಾಕಿಸ್ತಾನಿದಲ್ಲಿದ್ದಾರೆ: ಬಿಜೆಪಿ

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಛತ್ತೀಸ್ ಗಡ ಬಿಜೆಪಿ ಮಾಜಿ ಸಚಿವ ಕೇದಾರ್ ಕಶ್ಯಪ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಜಗದಲ್ಪುರ್: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಛತ್ತೀಸ್ ಗಡ ಬಿಜೆಪಿ ಮಾಜಿ ಸಚಿವ ಕೇದಾರ್ ಕಶ್ಯಪ್ ಕಾಂಗ್ರೆಸ್ ಅಧ್ಯಕ್ಷ  ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗಾಂಧಿ ವಂಶಸ್ಥರ ನಿಜವಾದ ಬೆಂಬಲಿಗರು ಪಾಕಿಸ್ತಾನದಲ್ಲಿದ್ದಾರೆ,. ಹೀಗಾಗಿ ರಾಹುಲ್ ಗಾಂಧಿ ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳಿದ್ದಾರೆ, ಅಮೇಥಿ  ಲೋಕಸಭೆ ಕ್ಷೇತ್ರವನ್ನು ಬಿಟ್ಟು ರಾಹುಲ್ ಗಾಂಧಿ ಪಾಕಿಸ್ತಾನಕ್ಕೆ ಹೋಗಲಿ ಎಂದು ರ್ಯಾಲಿಯೊಂದರಲ್ಲಿ ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರೇ ಕಾಂಗ್ರೆಸ್ ನವರು ಬೇಸರಿಸಿಕೊಳ್ಳುತ್ತಾರೆ ಎಂದು ಹೇಳಿದ ಅವರು, ನಿಮಗೆ ಯಾವ ರೀತಿಯ ಪ್ರಧಾನ ಮಂತ್ರಿ ಬೇಕು, ಮೋದಿ ಅಂಥವರೋ ಅಥವಾ ಪಪ್ಪು ಅಂಥವರೋ ಎಂದು ಪ್ರಶ್ನಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com