ನಮಗೆ ಭೂಮಿ, ಆಕಾಶ, ಬಾಹ್ಯಾಕಾಶದಲ್ಲೂ 'ಸರ್ಜಿಕಲ್ ಸ್ಟ್ರೈಕ್' ಮಾಡುವ ತಾಕತ್ತಿದೆ: ಪ್ರಧಾನಿ ಮೋದಿ

ಭಾರತ ದೇಶ ಈಗ ಭೂಮಿ, ಆಕಾಶ, ಬಾಹ್ಯಾಕಾಶದಿಂದಲೂ 'ಸರ್ಜಿಕಲ್ ದಾಳಿ' ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮೇರಠ್ ನಲ್ಲಿ ಮೋದಿ ಭಾಷಣ
ಮೇರಠ್ ನಲ್ಲಿ ಮೋದಿ ಭಾಷಣ
ಮೇರಠ್: ಭಾರತ ದೇಶ ಈಗ ಭೂಮಿ, ಆಕಾಶ, ಬಾಹ್ಯಾಕಾಶದಿಂದಲೂ 'ಸರ್ಜಿಕಲ್ ದಾಳಿ' ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದ ಮೇರಠ್ ನಲ್ಲಿ ಗುರುವಾರ ಚುನಾವಣಾ ಪ್ರಚಾರ ಅಭಿಯಾನವನ್ನು ಆರಂಭಿಸಿ ಮಾತನಾಡಿದ ಮೋದಿ, 'ಭಾರತ ದೇಶ ಈಗ ಭೂಮಿ, ಆಕಾಶ, ಬಾಹ್ಯಾಕಾಶದಿಂದಲೂ 'ಸರ್ಜಿಕಲ್ ದಾಳಿ' ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ನಿನ್ನೆ ಶತ್ರುರಾಷ್ಟ್ರಗಳ ಬೇಹು ಉಪಗ್ರಹಗಳನ್ನು ಹೊಡೆದುರುಳಿಸುವ ಕ್ಷಿಪಣಿ ಬಗ್ಗೆ ನಾನು ಮಾತನಾಡುವಾಗ, ರಂಗಭೂಮಿಯ ಸೆಟ್‌ ನಲ್ಲಿ ನಾನು ಮಾತನಾಡುತ್ತಿದ್ದೇನೆ ಎಂದು ಅವರು ಯೋಚಿಸಿದರು. ಬಹುಶಃ ಇದು ಕಾಂಗ್ರೆಸ್ ಪಾಲಿಗೆ ಇದು ಕನಸಿನ ಮಾತಾಗಿತ್ತೇನೋ ಎಂದು ರಾಹುಲ್ ಗಾಂಧಿ ಅವರ ಟ್ವೀಟ್ ಗೆ ವ್ಯಂಗ್ಯ ಮಾಡಿದ್ದಾರೆ.
ಇದೇ ವೇಳೆ, 'ನಮ್ಮ ಭದ್ರತಾ ಪಡೆಗಳು ಅತ್ಯಾಧುನಿಕ ಶಸ್ತ್ರೋಪಕರಣಗಳಿಗಾಗಿ ಹಿಂದಿನಿಂದಲೂ ಬೇಡುತ್ತಲೇ ಇದ್ದವು. ಆದರೆ ಹಿಂದಿನ ಸರ್ಕಾರವು ಕಡತಗಳನ್ನು ಕುರ್ಚಿಯಡಿಗೆ ಇಟ್ಟುಕೊಂಡು ಕುಳಿತಿತ್ತು ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು. 'ಅಂತರಿಕ್ಷದಲ್ಲಿ ಶತ್ರುಗಳ ಉಪಗ್ರಹವನ್ನು ಹೊಡೆದುರುಳಿಸುವ ಕ್ಷಿಪಣಿ ಪರೀಕ್ಷೆಗೆ ಅನುಮತಿ ನೀಡುವಂತೆ ವಿಜ್ಞಾನಿಗಳು ಒತ್ತಾಯಿಸುತ್ತಲೇ ಇದ್ದರು. ಅವರ ಸರ್ಕಾರವು (ಯುಪಿಎ) ಈ ನಿರ್ಧಾರವನ್ನೂ ಮುಂದಕ್ಕೆ ಹಾಕಿತ್ತು. ಭಾರತವನ್ನು 21ನೇ ಶತಮಾನದಲ್ಲಿ ಬಲಾಢ್ಯವಾಗಿಸಲು ಮತ್ತು ಅದರ ರಕ್ಷಣೆಗಾಗಿ, ಈ ನಿರ್ಧಾರವನ್ನು ಅದೆಷ್ಟೋ ಹಿಂದೆಯೇ ತೆಗೆದುಕೊಳ್ಳಬೇಕಿತ್ತು, ಆದರೆ ಅವರು ವಿಳಂಬ ಮಾಡಿದರು ಎಂದು ಮೋದಿ ಹೇಳಿದರು. 
'ಬಾಹ್ಯಾಕಾಶದಲ್ಲಿ ಶತ್ರುಗಳ ಉಪಗ್ರಹವನ್ನು ಹೊಡೆದುರುಳಿಸುವ ಕ್ಷಿಪಣಿ ಪರೀಕ್ಷೆಗೆ ಅನುಮತಿ ನೀಡುವಂತೆ ವಿಜ್ಞಾನಿಗಳು ಒತ್ತಾಯಿಸುತ್ತಲೇ ಇದ್ದರು. ಆದರೆ ಅವರ ಸರ್ಕಾರ (ಯುಪಿಎ) ಈ ನಿರ್ಧಾರವನ್ನೂ ಮುಂದಕ್ಕೆ ಹಾಕಿತ್ತು. ಭಾರತವನ್ನು 21ನೇ ಶತಮಾನದಲ್ಲಿ ಬಲಾಢ್ಯವಾಗಿಸಲು ಮತ್ತು ಅದರ ರಕ್ಷಣೆಗಾಗಿ, ಈ ನಿರ್ಧಾರವನ್ನು ಅದೆಷ್ಟೋ ಹಿಂದೆಯೇ ತೆಗೆದುಕೊಳ್ಳಬೇಕಿತ್ತು, ಆದರೆ ಅವರು ವಿಳಂಬ ಮಾಡಿದರು. ಫೆ.26ರಂದು (ಎ-ಸ್ಯಾಟ್ ಎಂಬ ಉಪಗ್ರಹ ನಾಶಕ ಕ್ಷಿಪಣಿ ಪರೀಕ್ಷೆ) ಏನಾದರೂ ಸ್ವಲ್ಪ ಎಡವಟ್ಟಾಗಿದ್ದರೂ ಈ ಜನ ನನ್ನ ಪ್ರತಿಕೃತಿ ದಹಿಸುತ್ತಿದ್ದರು ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷದ ನ್ಯಾಯ್ ಯೋಜನೆ ಕುರಿತು ವ್ಯಂಗ್ಯ ಮಾಡಿರುವ ಮೋದಿ, 'ಬಡವರಿಗಾಗಿ ಬ್ಯಾಂಕ್ ಖಾತೆ ತೆರೆಯುವ ನನ್ನ ಕೆಲಸವನ್ನು ದೂಷಿಸಿದವರೇ ಇಂದು, ಅದೇ ಖಾತೆಗಳಿಗೆ ಹಣ ಹಾಕುತ್ತೇವೆ ಅಂತ ಮಾತನಾಡುತ್ತಿದ್ದಾರೆ. ಮತದಾನ ಮಾಡುವ ಮುಂಚೆ ಭಾರತದ ಎರಡು ಚಿತ್ರಗಳನ್ನು ನೆನಪಿಗೆ ತಂದುಕೊಳ್ಳಿ - ಒಂದನೆಯದು 2014ರ ಮೊದಲಿನ ಭಾರತ ಹಾಗೂ 2014ರ ನಂತರದ ಭಾರತ" ಎಂದು ಅವರು ಮತದಾರರಿಗೆ ಕರೆ ನೀಡಿದರಲ್ಲದೆ, ಕಾಂಗ್ರೆಸ್ ಅನ್ನು ಕಿತ್ತು ಹಾಕಿದರಷ್ಟೇ ದೇಶದ ಬಡತನ ಕಿತ್ತುಹಾಕಿದಂತೆ ಎಂದು ಜನರ ಅರಿವಿಗೆ ಬರತೊಡಗಿದೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com