ಪ್ರಧಾನಿ ಮೋದಿ ಅಯೋಧ್ಯೆಗೆ ಹೋದರು, ಆದರೆ ರಾಮ ಮಂದಿರ ನಿರ್ಮಾಣ ವಿಷಯ ಪ್ರಸ್ತಾಪಿಸಲೇ ಇಲ್ಲ!

ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಅಯೋಧ್ಯೆಗೆ ಬುಧವಾರ ಮೊದಲ ಬಾರಿ ಭೇಟಿ ನೀಡಿದ್ದು ಚುನಾವಣಾ ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
ಲಕ್ನೊ: ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಅಯೋಧ್ಯೆಗೆ ಬುಧವಾರ ಮೊದಲ ಬಾರಿ ಭೇಟಿ ನೀಡಿದ್ದು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಆದರೆ ರಾಮಮಂದಿರ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಲೇ ಇಲ್ಲ.
ಜೈ ಶ್ರೀರಾಮ್ ಎಂಬ ಉದ್ಘಾರದೊಂದಿಗೆ ಭಾಷಣ ಕೊನೆಗೊಳಿಸಿದ ಪ್ರಧಾನಿ ರಾಮ ಮಂದಿರದ ವಿಷಯವನ್ನು ಎತ್ತಲೇ ಇಲ್ಲ. ಈ ಪವಿತ್ರ ಪುಣ್ಯಭೂಮಿಯಲ್ಲಿ ದೇವ ದೀಪಾವಳಿಯನ್ನು ಅದ್ದೂರಿಯಿಂದ ಆಚರಿಸಲಾಗುತ್ತಿದ್ದು ಪ್ರಯಾಗ್ ರಾಜ್ ನಲ್ಲಿ ಕುಂಭ ಮೇಳ ನಡೆಸಲಾಗುತ್ತದೆ ಎಂದು ಹೇಳಿದರು.
ಪ್ರಧಾನಿ ಮೋದಿಯವರ ರ್ಯಾಲಿ ಇಂದು ನಡೆದದ್ದು ಅಯೋಧ್ಯೆಯಿಂದ 25 ಕಿಲೋ ಮೀಟರ್ ದೂರದಲ್ಲಿ ಅಯೋಧ್ಯ-ಅಂಬೇಡ್ಕರ್ ನಗರ ಗಡಿಭಾಗದ ಗೊಸೈಂಗಂಜ್ ಎಂಬಲ್ಲಿ.
ಅಯೋಧ್ಯೆಗೆ ಬಂದು ಬಿಜೆಪಿಯ ಪ್ರಮುಖ ಅಜೆಂಡಾವಾದ ರಾಮ ಮಂದಿರ ನಿರ್ಮಾಣದ ಬಗ್ಗೆ ಪ್ರಧಾನಿ ಮೋದಿಯವರು ಮಾತನಾಡದೇ ಇರುವುದು ಬೇಸರದ ವಿಚಾರ ಎಂದು ಮಹಂತ್ ಪರಮಹಂಸ ದಾಸ್ ಹೇಳಿದ್ದಾರೆ. ಪ್ರಧಾನಿಯವರು ಇಲ್ಲಿನ ತಾತ್ಕಾಲಿಕ ರಾಮ ಮಂದಿರಕ್ಕೆ ಕೂಡ ಭೇಟಿ ನೀಡಲಿಲ್ಲ. ಮಂಹತ್ ನೃತ್ಯ ಗೋಪಾಲ್ ದಾಸ್ ರಾಮ ಜನ್ಮಭೂಮಿ ನ್ಯಾಸ್ ನ ಮುಖ್ಯಸ್ಥರಾಗಿದ್ದು, ಮೋದಿಯವರು ತಾತ್ಕಾಲಿಕ ರಾಮ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಬೇಕೆಂದು ಬಯಸಿದ್ದರು.
ರಾಮ ಲಲ್ಲಾನ ಆಶೀರ್ವಾದವನ್ನು ಮೋದಿಯವರು ಇಲ್ಲಿಗೆ ಬಂದು ಪಡೆದುಕೊಂಡು ಹೋಗಿದಿದ್ದರೆ ದೇಶಕ್ಕೆ ಒಂದು ಉತ್ತಮ ಸಂದೇಶ ನೀಡಿದಂತಾಗುತ್ತಿತ್ತು ಎಂದರು ಮಹಂತ್ ನೃತ್ಯ ಗೋಪಾಲ್ ದಾಸ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com