ಸುಸಂಸ್ಕೃತ ಕುಟುಂಬಗಳು ತಮ್ಮ ಮಕ್ಕಳನ್ನು ಪ್ರಿಯಾಂಕಾ ಗಾಂಧಿ ವಾದ್ರಾರಿಂದ ದೂರವಿಡಿ- ಸ್ಮೃತಿ ಇರಾನಿ

ಸುಸಂಸ್ಕೃತ ಕುಟುಂಬಗಳು ತಮ್ಮ ಮಕ್ಕಳನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಂದ ದೂರ ಇಡುವಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳುವ ಮೂಲಕ ಪ್ರಿಯಾಂಕಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸ್ಮೃತಿ ಇರಾನಿ
ಸ್ಮೃತಿ ಇರಾನಿ

ಅಮೇಥಿ: ಸುಸಂಸ್ಕೃತ ಕುಟುಂಬಗಳು ತಮ್ಮ ಮಕ್ಕಳನ್ನು ಎಐಸಿಸಿ  ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಂದ ದೂರ ಇಡುವಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳುವ ಮೂಲಕ ಪ್ರಿಯಾಂಕಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ಮಕ್ಕಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯ ಕುರಿತ ವಿಡಿಯೋ ವೈರಲ್ ಆದ ನಂತರ ಇರಾನಿ, ಪ್ರಿಯಾಂಕಾ ಗಾಂಧಿ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ.

ಪ್ರಧಾನಿ ಬೈಯುವಂತೆ ಪ್ರಿಯಾಂಕಾ ಗಾಂಧಿ ಮಕ್ಕಳಿಗೆ ಹೇಳಿದ್ದಾರೆ. ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಕಳುಹಿಸಬೇಡಿ, ಇದರಿಂದ ಮಕ್ಕಳು ಏನನ್ನೂ ಕಲಿಯುತ್ತಾರೆ. ಎಲ್ಲಾ ಸುಸಂಸ್ಕೃತ ಕುಟುಂಬಗಳನ್ನು ಕೇಳಿಕೊಳ್ಳುತ್ತೇನೆ ತಮ್ಮ ಮಕ್ಕಳನ್ನು ಪ್ರಿಯಾಂಕಾ ಬಳಿಗೆ ಕಳುಹಿಸಬೇಡಿ , ಸುಸಂಸ್ಕೃತ ಕುಟುಂಬಗಳು ಮುಚ್ಚಿಹೋಗದಿರುವುದರಿಂದ ನನಗೆ ಸಂತೋಷವಾಗಿದೆ ಎಂದು ಸ್ಮೃತಿ ಇರಾನಿ ಎಎನ್ ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಿಯಾಂಕಾ ಗಾಂಧಿ ಅವಮಾನಿಸಿದ್ದಾರೆ. ಗೋರಕನಾಥ್ ಮಠದ ಅಧ್ಯಕ್ಷರಿಗೂ ಅಗೌರವ ನೀಡಿದ್ದಾರೆ  ಇದು ಅವರ ನೈಜ ಮುಖವಾಗಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಅಮೇಥಿಯಿಂದ ಫಲಾಯನ ಮಾಡಿರುವ ಸಹೋದರ ರಾಹುಲ್ ಗಾಂಧಿ ಪರ ನಿಲ್ಲುವುದಾಗಿ ಹೇಳುತ್ತಾರೆ. ಪ್ರಿಯಾಂಕಾ ಅಭ್ಯರ್ಥಿ ಅಲ್ಲ, ರಾಹುಲ್ ಅವರ ಅಸಾಮರ್ಥ್ಯದಿಂದ  ಪ್ರಿಯಾಂಕಾ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸ್ಮೃತಿ ಇರಾನಿ ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com