ಕೇಜ್ರಿವಾಲ್ ಗೆ ಆಘಾತ: ಎಎಪಿ ಶಾಸಕ ಅನಿಲ್ ಭಾಜಪೇಯಿ ಬಿಜೆಪಿಗೆ

ದೆಹಲಿಯ ಫ಼್ಗ್ಗಾಂಧಿ ನಗರ ಆಮ್ ಆದ್ಮಿ ಪಕ್ಷದ ಶಾಸಕ ಅನಿಲ್ ಭಾಜಪೇಯಿ ಶುಕ್ರವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಕೇಜ್ರಿವಾಲ್ ಗೆ ಆಘಾತ: ಎಎಪಿ ಶಾಸಕ ಅನಿಲ್ ಭಾಜಪೇಯಿ ಬಿಜೆಪಿಗೆ
ಕೇಜ್ರಿವಾಲ್ ಗೆ ಆಘಾತ: ಎಎಪಿ ಶಾಸಕ ಅನಿಲ್ ಭಾಜಪೇಯಿ ಬಿಜೆಪಿಗೆ
ನವದೆಹಲಿ: ದೆಹಲಿಯ ಫ಼್ಗ್ಗಾಂಧಿ ನಗರ ಆಮ್ ಆದ್ಮಿ ಪಕ್ಷದ ಶಾಸಕ ಅನಿಲ್ ಭಾಜಪೇಯಿ ಶುಕ್ರವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವ ವಿಜಯ್ ಗೊಯೆಲ್ ಅವರ ಉಪಸ್ಥಿತಿಯಲ್ಲಿ  ಅನಿಲ್ ಕೇಸರಿ ಪಕ್ಷಕ್ಕೆ ಸೇರಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಜೆಪಿ ಏಳು ಎಎಪಿ ಶಾಸಕರನ್ನು ಸಂಪರ್ಕಿಸಿದ್ದು, ಒಬ್ಬ ಶಾಸಕರಿಗೆ ತಲಾ 10 ಕೋಟಿ ರೂ ನಿಡಿ ಖರೀದಿಸುತ್ತಿದೆ ಎಂದು ಆರೋಪಿಸಿದ್ದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
"ನಾನು ಕಳೆದ ಐದು ವರ್ಷಗಳಿಂದ ಎಎಪಿಯೊಂದಿಗೆ ಕೆಲಸ ಮಾಡಿದ್ದೆ ಆದರೆ ಪಾರ್ಟಿಯಲ್ಲಿ ನನಗೆ ಸರಿಯಾದ ಗೌರವ ಸಿಕ್ಕಲಿಲ್ಲ. ಪಕ್ಷದ ಕಾರ್ಯವೀಖರಿ ನನಗೆ ಇಷ್ಟವಾಗಿಲ್ಲ. ನೀವು ಹಾಗೂ ನಿಮ್ಮ ಕುಟುಂಬ ವೈಯುಕ್ತಿಕ ಜೀವನದಲ್ಲಿ ಗೌರವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾದರೆ ಆಗ ಅಂತಹ ಸನ್ನಿವೇಶದಿಂದ ದೂರಾಗುವುದೇ ಉತ್ತಮ. ನಾನೊಂದು ವೇಳೆ ಇದೇ ಪಕ್ಷದಲ್ಲಿ ಮುಂದುವರಿದರೆ ಇದು ನನಗೆ ಆತ್ಮಹತ್ಯೆಗೆ ಯತ್ನ ಮಾಡಿದಂತಹಾ ಅನುಬವವಾಗಲಿದೆ."ಅನಿಲ್ ಎಎನ್ಐಗೆ ತಿಳಿಸಿದರು
"ಎಎಪಿ ಪಕ್ಷಕ್ಕೆ ದೇಣಿಗೆ ತರಲು ಅವರು ನಮ್ಮನ್ನು ಕೇಳುತ್ತಿದ್ದರು, ಎಲ್ಲಿಂದ ನಾವು ಅದನ್ನು ಪಡೆಯಲು ಸಾಧ್ಯ? ನನ್ನ ಪರಿಸ್ಥಿತಿಯನ್ನು ಕಂಡು ನನಗೇ ಕಣ್ನೀರು ಹಾಕುವಂತಾಗಿತ್ತು. " ಅವರು ಹೇಳಿದ್ದಾರೆ. 
ಎಎಪಿಯ ಇನೂ 14  ಶಾಸಕರು ಬಿಜೆಪಿ ಸೇರಲು ಬಯಸುತ್ತಿದ್ದಾರೆಯೆ ಎಂಬ ಪ್ರಶ್ನೆಗೆ ದಯವಿಟ್ಟು ನಿರೀಕ್ಷಿಸಿ ಎಂದಷ್ಟೇ ಹೇಳಿದ್ದಾರೆ. 
ಗುರುವಾರ ಬಿಜೆಪಿ ನಾಯಕ ಗೋಯಲ್ ಎಎಪಿ ಹಲವು ಶಾಸಕರು ಪಕ್ಷ ಬಿಡಲು ಸಿದ್ದವಿದ್ದಾರೆ ಎಂದು ಹೇಳಿದ್ದರು. ಬಿಜೆಪಿ ಎಎಪಿ ಶಾಸಕರನ್ನು ಖರೀದಿಸಬೇಕಾದ ಅಗತ್ಯವಿಲ್ಲ ಎಂದು ಗೋಯಲ್ ಹೇಳಿದ್ದಾರೆ, ಅಲ್ಲದೆ ಬಿಜೆಪಿ ಶಾಸಕರನ್ನು ಖರೀದಿಸಲು ರೂ 10 ಕೋಟಿ ನೀಡಿದೆ ಎಂಬುದು ಸುಳ್ಳು ಎಂದೂ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com