ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಮತದಾನ!

ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಮತದಾನ ನಡೆಯುವ ಸಾಧ್ಯತೆ ಇದೆ ಎಂದು ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಶೋಧನಾ ವರದಿ ಹೇಳಿದೆ.

2019 ರ ಲೋಕಸಭಾ ಚುನಾವಣೆಗೆ 7 ಹಂತಗಳಲ್ಲಿ ಮತದಾನ ನಡೆಯಲಿದ್ದು, 900 ಮಿಲಿಯನ್ ಜನರು ಮತದಾನ ನಡೆಸಲಿದ್ದಾರೆ. ಇನ್ನು ಮೂರು ಹಂತಗಳಲ್ಲಿ ನಡೆಯಲಿರುವ ಮತದಾನದಲ್ಲಿ ಸಣ್ಣ ಪ್ರಮಾಣದ ಏರಿಕೆಯಾದರೂ ಸಹ ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಮತದಾನ ನಡೆಯುವ ಸಾಧ್ಯತೆ ಇದೆ. 
ಮೇ.6 ರಂದು 5 ನೇ ಹಂತದ ಮತದಾನ ನಡೆಯಲಿದ್ದು, 4 ನೇ ಹಂತದ ಮತದಾನದ ನಂತರ ಮತದಾನದ ಪ್ರಮಾಣ ಶೇ.67 ರಷ್ಟಿದೆ. 2014 ರಲ್ಲಿ ಮತದಾನ ಶೇ.67.6 ರಷ್ಟಿತ್ತು ಎಂದು ಎಸ್ ಬಿಐ ಎಕೋವ್ರಾಪ್ ವರದಿ ಹೇಳಿದೆ. 
ಇದೇ ಮಾದರಿಯ ಟ್ರೆಂಡ್ ಮುಂದುವರೆದರೆ ಕಳೆದ ಬಾರಿಗಿಂತ ಈ ಬಾರಿಯ ಮತದಾನದ ಪ್ರಮಾಣ ಏರಿಕೆಯಾಗಲಿದೆ 4 ನೇ ಹಂತದ ಮತದಾನದ ನಂತರ ಶೇ.1 ರಷ್ಟು ಮತದಾನ ಹೆಚ್ಚಿದರೂ ಅದು ಸ್ವತಂತ್ರ ಭಾರತದ ಇತಿಹಾಸದಲ್ಲೇ  ಅತಿ ಹೆಚ್ಚು ಪ್ರಮಾಣದ ಮತದಾನ ಆಗಿರಲಿದೆ ಎಂದು ಎಸ್ ಬಿ ಐ ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com