ಚುನಾವಣೆ ಪ್ರಚಾರದ ವೇಳೆ ಮಕ್ಕಳ ಬಳಕೆ: ಪ್ರಿಯಾಂಕಾ ಗಾಂಧಿಗೆ ಎನ್ ಸಿಪಿಸಿಆರ್ ನೊಟೀಸ್

ಚುನಾವಣಾ ಪ್ರಚಾರದ ವೇಳೆ ಮಕ್ಕಳನ್ನು ಬಳಸಿಕೊಂಡದ್ದಕ್ಕಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ....

Published: 03rd May 2019 12:00 PM  |   Last Updated: 03rd May 2019 12:38 PM   |  A+A-


Priyanka Gandhi Vadra with children

ಮಕ್ಕಳೊಂದಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ

Posted By : SUD SUD
Source : PTI
ನವದೆಹಲಿ: ಚುನಾವಣಾ ಪ್ರಚಾರದ ವೇಳೆ ಮಕ್ಕಳನ್ನು ಬಳಸಿಕೊಂಡದ್ದಕ್ಕಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ(ಎನ್ ಸಿಪಿಸಿಆರ್ )ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ನೊಟೀಸ್ ಜಾರಿ ಮಾಡಿದೆ.

ದೂರಿನ ಪ್ರತಿ ಅಥವಾ ವಿವರಗಳು ಮಾಧ್ಯಮಗಳಿಗೆ ಲಭ್ಯವಾಗಿಲ್ಲ. ದೂರಿಗೆ ಸಂಬಂಧಪಟ್ಟಂತೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಪ್ರಿಯಾಂಕಾ ಗಾಂಧಿ ಮುಂದೆ ಮಕ್ಕಳು ಪ್ರಧಾನಿ ಮೋದಿ ಬಗ್ಗೆ ನಿಂದನಕಾರಿ ಶಬ್ದಗಳನ್ನು ಬಳಸಿ ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ.

ಚುನಾವಣೆ ಪ್ರಚಾರದ ವೇಳೆ ಮಕ್ಕಳನ್ನು ಬಳಸಿಕೊಂಡಿದ್ದಕ್ಕೆ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ನೊಟೀಸ್ ಜಾರಿ ಮಾಡಿದೆ. 2014, ಆಗಸ್ಟ್ 4ರಂದು ಮುಂಬೈ ಹೈಕೋರ್ಟ್ ಹೊರಡಿಸಿದ್ದ ಆದೇಶದಲ್ಲಿ ಚುನಾವಣೆ ಪ್ರಚಾರದ ವೇಳೆ ಮಕ್ಕಳನ್ನು ಬಳಸಿಕೊಳ್ಳಬಾರದೆಂದು ಆದೇಶ ನೀಡಿದ್ದನ್ನು ಆಯೋಗ ನೊಟೀಸ್ ನಲ್ಲಿ ಉಲ್ಲೇಖಿಸಿದೆ.

ಘಟನೆಗೆ ಸಂಬಂಧಿಸಿದಂತೆ ಇನ್ನು ಮೂರು ದಿನಗಳೊಳಗೆ ವಿವರ ನೀಡುವಂತೆ ಪ್ರಿಯಾಂಕಾ ಗಾಂಧಿಗೆ ಸೂಚಿಸಿದೆ. ಮಕ್ಕಳು ಘೋಷಣೆ ಕೂಗುತ್ತಿರುವುದು ಯಾವ ಸಂದರ್ಭದಲ್ಲಿ ಎಲ್ಲಿ, ಮಕ್ಕಳ ಹೆಸರು ಮತ್ತು ವಿಳಾಸವನ್ನು ನೀಡುವಂತೆ ಕೂಡ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ನೊಟೀಸ್ ನಲ್ಲಿ ಕೇಳಿದೆ.
Stay up to date on all the latest ದೇಶ news with The Kannadaprabha App. Download now
facebook twitter whatsapp