125 ದಿನಗಳಲ್ಲಿ 200 ಕಾರ್ಯಕ್ರಮಗಳು!: ಇದು ದಣಿವರಿಯದ ಪ್ರಧಾನಿ ಮೋದಿಯ ಚುನಾವಣಾ ಪ್ರಚಾರ!

ಪ್ರಧಾನಿ ನರೇಂದ್ರ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಂಚಾರ ಮಾಡುತ್ತಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
125 ದಿನಗಳಲ್ಲಿ 200 ಕಾರ್ಯಕ್ರಮಗಳು!: ಇದು ದಣಿವರಿಯದ ಪ್ರಧಾನಿ ಮೋದಿಯ ವೇಳಾಪಟ್ಟಿ
125 ದಿನಗಳಲ್ಲಿ 200 ಕಾರ್ಯಕ್ರಮಗಳು!: ಇದು ದಣಿವರಿಯದ ಪ್ರಧಾನಿ ಮೋದಿಯ ವೇಳಾಪಟ್ಟಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಂಚಾರ ಮಾಡುತ್ತಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. 
ಒಂದರ ಮೇಲೆ ಒಂದರಂತೆ ಬಿಡುವಿಲ್ಲದೇ ಸತತ 18 ಗಂಟೆಗಳು ಕೆಲಸ ಮಾಡುವ ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಯಲ್ಲಿ 125 ದಿನಗಳಲ್ಲಿ ದೇಶದ ಉದ್ದಗಲಕ್ಕೂ 200 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎನ್ನುತ್ತಿದೆ ಅವರದ್ದೇ ವೆಬ್ ಸೈಟ್ ನೀಡಿರುವ ಮಾಹಿತಿ. 
ಚುನಾವಣೆ ಪ್ರಚಾರಕ್ಕಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸುತ್ತುತ್ತಿರುವ ಪ್ರಧಾನಿ ಮೋದಿ, ಕಳೆದ 125 ದಿನಗಳಲ್ಲಿ ಮೋದಿ ಭೇಟಿ ನೀಡದೇ ಇರುವ ದೇಶದ ಭಾಗ ಯಾವುದೂ ಉಳಿದಿಲ್ಲ. ರೈತರು, ವಿದ್ಯಾರ್ಥಿಗಳು, ವಿಜ್ಞಾನಿಗಳು, ಉದ್ಯಮಿಗಳು, ವಿದೇಶಿ ನಾಯಕರು, ಕಾರ್ಯಕರ್ತರು ಹೀಗೆ ಹತ್ತಾರು ವರ್ಗಗಳೊಂದಿಗೆ ಪ್ರಧಾನಿ ಮೋದಿ ಈ ಅವಧಿಯಲ್ಲಿ ಸಂವಹ ನಡೆಸಿದ್ದಾರೆ. 
ಈ ಅಂಕಿ-ಅಂಶಗಳು ಪ್ರಧಾನಿ ನರೇಂದ್ರ ಮೋದಿ ಅವರ ಮಲ್ಟಿ ಟಾಸ್ಕಿಂಗ್ ಸಾಮರ್ಥ್ಯಕ್ಕೆ ಅತ್ಯುತ್ತಮ ಉದಾಹರಣೆ, ಕಳೆದ 125 ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹುತೇಕ ಎಲ್ಲಾ ಭಾರತೀಯರನ್ನೂ ತಲುಪುವ ಪ್ರಯತ್ನ ಮಾಡಿದ್ದಾರೆ ಎಂದು ವೆಬ್ ಸೈಟ್ ಹೇಳಿದೆ. 
ಈ ನಡುವೆಯೇ ಪುಲ್ವಾಮ ಭಯೋತ್ಪಾದಕ ದಾಳಿಯನ್ನು ನಿರ್ವಹಿಸಿದ್ದು, ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು, ಮಸೂದ್ ಅಜರ್ ನ್ನು ಜಾಗತಿಕ ಉಗ್ರನೆಂದು ಘೋಷಿಸಲು ರಾಜತಾಂತ್ರಿಕತೆ ಹೆಣೆದಿದ್ದು, ಕುಂಭಮೇಳಕ್ಕೆ ಭೇಟಿ, ಕೇಂದ್ರ ಸರ್ಕಾರದ ಯೋಜನೆಗಳ ಉದ್ಘಾಟನೆ ಮಾಡಿದ್ದಾರೆ. ಕುಂಭ ಮೇಳಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ ಎಂದು ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com