ಮೋದಿ ಸರ್ಕಾರ ಕಿತ್ತೊಗೆಯುವುದೇ ಗುರಿ, ಮಹಾಘಟ್ ಬಂಧನ್ ಸೂಕ್ತ ಸಮಯದಲ್ಲಿ ಒಂದಾಗುತ್ತದೆ: ಸ್ಯಾಮ್ ಪಿತ್ರೋಡಾ

ಮೋದಿ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಗುರಿಯಾಗಿದ್ದು, ಸೂಕ್ತ ಸಂದರ್ಭದಲ್ಲಿ ಮಹಾಘಟ್ ಬಂಧನ್ ಒಂದಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಮೋದಿ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಗುರಿಯಾಗಿದ್ದು, ಸೂಕ್ತ ಸಂದರ್ಭದಲ್ಲಿ ಮಹಾಘಟ್ ಬಂಧನ್ ಒಂದಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸ್ಯಾಮ್ ಪಿತ್ರೋಡಾ, ನಮ್ಮ ಸಾಮಾನ್ಯ ಅಜೆಂಡಾ ಒಂದೇ ಅದು ಮೋದಿ ಸರ್ಕಾರವನ್ನು ಕಿತ್ತೊಗೆಯುವುದು. ನಮ್ಮ ನಡುವೆ ಸೀಟು ಹಂಚಿಕೆ ವಿಚಾರ ಸಂಬಂಧ ಭಿನ್ನಾಭಿಪ್ರಾಯಗಳಿವೆ. ಆದರೆ ನಮ್ಮ ನಡುವಿನ ಸಾಮಾನ್ಯ ಅಜೆಂಡಾ ನಮ್ಮನ್ನು ಮತ್ತೆ ಒಂದುಗೂಡಿಸುತ್ತದೆ. ಈ ಬಗ್ಗೆ ಆತಂಕ ಪಡುವ ಯಾವುದೇ ಅವಶ್ಯಕತೆ ಇಲ್ಲ. ಮಹಾಘಟ್ ಬಂಧನದ ಇತರೆ ಪಕ್ಷಗಳು ಖಂಡಿತಾ ನಮ್ಮನ್ನು ಸೇರುತ್ತವೆ ಎಂದು ಹೇಳಿದರು.
ಇದೇ ವೇಳೆ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ ಪಿತ್ರೋಡಾ, ಸಮುದಾಯಗಳನ್ನು ಒಡೆಯುವುದರಿಂದ ಅಥವಾ ಅವರ ನಡುವೆ ಕೋಮು ಗಲಭೆ ಉಂಟು ಮಾಡುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಜನರ ನಡುವೆ ಸಂಘರ್ಷ ಮೂಡಿಸುವುದರಿಂದ ಉದ್ಯೋಗ ಸೃಷ್ಟಿ ಸಾಧ್ಯವಿಲ್ಲ. ಈ ಬಗ್ಗೆ ನಮ್ಮ ಮಿತ್ರಪಕ್ಷಗಳಿಗೂ ಗೊತ್ತು. ಸರಿಯಾದ ಸಂದರ್ಭದಲ್ಲಿ ಅವರು ನಮ್ಮ ಜೊತೆ ಕೈ ಜೋಡಿಸುತ್ತಾರೆ ಎಂದು ಹೇಳಿದ್ದಾರೆ. ಅಂತೆಯೇ ಹಾಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸಲಿದ್ದು, ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿದ್ದಾರೆ.
ಅಂತೆಯೇ ರಾಹುಲ್ ಗಾಂಧಿ ಪೌರತ್ವದ ಕುರಿತ ವಿವಾದದ ಕುರಿತು ಮಾತನಾಡಿದ ಪಿತ್ರೋಡಾ, 'ರಾಹುಲ್‌ ಗಾಂಧಿ ಅವರು 15 ವರ್ಷಗಳಿಂದ ಈ ದೇಶದ ಸಂಸದರು. 15 ವರ್ಷ ರಾಹುಲ್‌ ಪಕ್ಕದಲ್ಲೇ ಕುಳಿತವರು ಅವರ ಪೌರತ್ವದ ಈಗ ಎಚ್ಚರವಾಗಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com