ಮೋದಿ ಒಡೆದು ಆಳುವುದಕ್ಕೆ ಪ್ರಯತ್ನ- ಮಾಯಾವತಿ

ಬಿಎಸ್ಪಿ ಹಾಗೂ ಎಸ್ಪಿ ನಡುವೆ ಒಡಕು ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಉಭಯ ಪಕ್ಷಗಳ ನಡುವಿನ ಮೈತ್ರಿ ಒಡೆಯದೆ ಶಾಶ್ವತವಾಗಿ ಉಳಿಯಲಿದೆ ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಹೇಳಿದ್ದಾರೆ.
ಮಾಯಾವತಿ
ಮಾಯಾವತಿ

ಲಖನೌ:  ಬಿಎಸ್ಪಿ ಹಾಗೂ ಎಸ್ಪಿ ನಡುವೆ ಒಡಕು ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಉಭಯ ಪಕ್ಷಗಳ ನಡುವಿನ ಮೈತ್ರಿ ಒಡೆಯದೆ ಶಾಶ್ವತವಾಗಿ ಉಳಿಯಲಿದೆ ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಹೇಳಿದ್ದಾರೆ.

ಎಸ್ಪಿ ಹಾಗೂ ಬಿಎಸ್ಪಿ ನಡುವೆ ಭಿನ್ನಾಮತ ಸೃಷ್ಟಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ. ನಿನ್ನೆ ದಿನ ಪ್ರತಾಪ್ ಗಡದಲ್ಲಿ ನಡೆದ ಮೋದಿ ಚುನಾವಣಾ ಪ್ರಚಾರವೇ ಇದಕ್ಕೆ ಸಾಕ್ಷಿಯಂತಿದೆ. ಕಾಂಗ್ರೆಸ್ ಜೊತೆಗೆ ನಾವು ಯಾವ ರೀತಿಯ ಸಂಬಂಧವನ್ನು ಹೊಂದಿರುತ್ತೇವೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಎಂದು ಹೇಳಿದ ಮಾಯಾವತಿ, ನಮ್ಮ ಘಟ್ ಬಂಧನ ಸದೃಢ ಘಟಬಂಧನ್ ವಾಗಲಿದೆ. ಇದನ್ನು ಪ್ರಧಾನಿ ಮೋದಿ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಬಗ್ಗೆ ಸಮಾಜವಾದಿ ಪಕ್ಷ ಮೃಧು ಧೋರಣೆ ತಾಳಿದ್ದರೆ, ಬಿಎಸ್ಪಿ ಕಾಂಗ್ರೆಸ್  ಮೇಲೆ ದಾಳಿ ನಡೆಸುತ್ತಿದೆ, ಕಾಂಗ್ರೆಸ್ ನಾಯಕರು ಎಸ್ಪಿ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ ಎಂದು ನರೇಂದ್ರ ಮೋದಿ ನಿನ್ನೆ ಹೇಳಿಕೆ ನೀಡಿದ್ದರು.ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಸಮಾಜವಾದಿ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದನ್ನು ಉಲ್ಲೇಖಿಸಿ  ಮೋದಿ ಈ ರೀತಿಯ ಮಾತುಗಳನ್ನಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com