5ನೇ ಹಂತದ ಚುನಾವಣೆ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ, ಪುಲ್ವಾಮಾದಲ್ಲಿ ಗ್ರೆನೇಡ್ ದಾಳಿ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಬ್ಯಾರಕ್ ಪುರದ ಬಿಜೆಪಿ ಅಭ್ಯರ್ಥಿ ಅರ್ಜುನ್ ಸಿಂಗ್ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

Published: 06th May 2019 12:00 PM  |   Last Updated: 06th May 2019 11:42 AM   |  A+A-


BJP  Candidate Arjun singh

ಹಲ್ಲೆಗೊಳಗಾದ ಬಿಜೆಪಿ ಅಭ್ಯರ್ಥಿ ಅರ್ಜುನ್ ಸಿಂಗ್

Posted By : ABN ABN
Source : The New Indian Express
ನವದೆಹಲಿ: ಏಳು ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಲ್ಲಿ ಐದನೇ ಹಂತದ ಮತದಾನ  ಪ್ರಗತಿಯಲ್ಲಿದ್ದು, ಮತದಾರರು  ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಬ್ಯಾರಕ್ ಪುರದ ಬಿಜೆಪಿ ಅಭ್ಯರ್ಥಿ ಅರ್ಜುನ್ ಸಿಂಗ್ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

ಮತದಾರರಲ್ಲಿ ಭಯ ಮೂಡಿಸುತ್ತಿದ್ದ ಟಿಎಂಸಿ ಗೂಂಡಾಗಳು ತಮ್ಮನ್ನು ಮತಗಟ್ಟೆಯಿಂದ ಹೊರಗೆ ದಬ್ಬಿ, ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಗಾಯಗೊಂಡಿರುವುದಾಗಿ ಅರ್ಜುನ್ ಸಿಂಗ್  ಹೇಳಿಕೊಂಡಿದ್ದಾರೆ.

ಮತ್ತೊಂದೆಡೆ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿನ ಪುಲ್ವಾಮಾದ ರೊಮೊ ಮತಗಟ್ಟೆಯಲ್ಲಿ  ಗ್ರೆನೇಡ್ ದಾಳಿ ನಡೆದಿದೆ. ಆದರೆ, ಯಾರೂ ಕೂಡಾ ಗಾಯಗೊಂಡ  ಬಗ್ಗೆ ವರದಿಯಾಗಿಲ್ಲ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸ್ಮೃತಿ ಇರಾನಿ ಮತ್ತಿತರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಲಖನೌದಲ್ಲಿ ತಮ್ಮ ಕುಟುಂಬದೊಂದಿಗೆ  ಮತ ಚಲಾಯಿಸಿದ ರಾಜನಾಥ್ ಸಿಂಗ್, ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ಇದನ್ನು ಜನರೇ ನಿರ್ಧರಿಸಲಿದ್ದಾರೆ ಎಂದು ಹೇಳಿದರು. href="https://twitter.com/ANI/status/1125245923691356165?ref_src=twsrc%5Etfw">May 6, 2019


ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಇದು ಬಡ ಜನರು ಹಾಗೂ ರಾಹುಲ್ ಗಾಂಧಿ ನಡುವಣ ಹೋರಾಟವಾಗಿದೆ ಎಂದು ಹೇಳಿದರು.

ಮತ್ತೊಂದೆಡೆ ಜಾರ್ಖಂಡ್ ನ  ಹಜಾರಿಬಾಗ್ ನಲ್ಲಿನ  ಮತಗಟ್ಟೆ ಸಂಖ್ಯೆ- 450ರಲ್ಲಿ 105 ವರ್ಷದ ವೃದ್ಧೆಯೊಬ್ಬರು ಮತ ಚಲಾಯಿಸಿದರು.

Stay up to date on all the latest ದೇಶ news with The Kannadaprabha App. Download now
facebook twitter whatsapp