ಐಎಎಫ್ ಯುದ್ಧ ವಿಮಾನಗಳು ಮೋದಿ ವೈಯಕ್ತಿಕ ಟ್ಯಾಕ್ಸಿಯಾಗಿ ಬಳಕೆ: ಕಾಂಗ್ರೆಸ್

ಐಎಎಫ್ ಯುದ್ಧ ವಿಮಾನಗಳನ್ನು ಮೋದಿ ಸ್ವಂತ ಟ್ಯಾಕ್ಸಿಯನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಆಪಾದಿಸಿದೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಐಎನ್ ಎಸ್ ವಿರಾಟ್ ಯುದ್ಧ ನೌಕೆಗಳನ್ನು ರಾಜೀವ್ ಗಾಂಧಿ ವೈಯಕ್ತಿಕ ಟ್ಯಾಕ್ಸಿಯಾಗಿ ಬಳಕೆ ಮಾಡಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ ಬೆನ್ನಲ್ಲೇ,  ಐಎಎಫ್ ಯುದ್ಧ ವಿಮಾನಗಳನ್ನು ಮೋದಿ ಸ್ವಂತ ಟ್ಯಾಕ್ಸಿಯನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಆಪಾದಿಸಿದೆ.

ಐಎನ್ ಎಸ್ ವಿರಾಟ್ ಯುದ್ಧ ನೌಕೆಗಳನ್ನು ರಾಜೀವ್ ಗಾಂಧಿ ರಜೆ ಕಳೆಯಲು ಬಳಕೆ ಮಾಡಿಲ್ಲ ಎಂದು ನಿವೃತ್ತ ಭಾರತೀಯ ನೌಕಾಪಡೆಯ ವೈಸ್ ಆಡ್ಮಿರಲ್ ವಿನೋದ್ ಪಾರ್ಸಿಚಾ ಸ್ಪಷ್ಟಪಡಿಸಿದ್ದಾರೆ.ಆದರೆ, ವಾಸ್ತವ ಸ್ಥಿತಿ ಅರಿಯದ ಮೋದಿ, ತನ್ನ ಸಾಧನೆ ಬಗ್ಗೆ ಮಾತನಾಡದೆ ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಸುದ್ದಿಗೋಷ್ಠಿಯಲ್ಲಿ  ಹೇಳಿದ್ದಾರೆ.

30 ವರ್ಷಗಳ ಹಿಂದೆ ರಾಜೀವ್ ಗಾಂಧಿ ರಜೆಗಾಗಿ ಐಎನ್ ಎಸ್ ವಿರಾಟ್ ನೌಕೆಯಲ್ಲಿ ತೆರಳತ್ತಿದ್ದರು ಎಂದು ಮೋದಿ ನಿರಂತರವಾಗಿ ಸುಳ್ಳು ಹೇಳುತ್ತಿದ್ದಾರೆ. ಅದು ಸುಳ್ಳು ಎಂಬುದನ್ನು ಹಿರಿಯ ಅಧಿಕಾರಿಗಳೇ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ಭಾರತೀಯ ವಾಯುಪಡೆ ಯುದ್ಧ ವಿಮಾನಗಳನ್ನು ಮೋದಿ ಸ್ವಂತ ಟ್ಯಾಕ್ಸಿಯನ್ನಾಗಿ ಮಾಡಿಕೊಂಡಿದ್ದಾರೆ. ಚುನಾವಣಾ ಕಾರ್ಯಕ್ಕಾಗಿ ಕೇವಲ 744  ರೂಪಾಯಿಯನ್ನು ಮಾತ್ರ ಪಾವತಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜಿವಾಲಾ ಮಾತನಾಡಿ,  ಟ್ವೀಟ್ ಮಾಡಿದ್ದಾರೆ.

ಆರ್ ಟಿಐ ಆಧಾರದ ಮೇಲಿನ ಮಾಧ್ಯಮಗಳ ವರದಿಗಳ ಪ್ರಕಾರ  ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಈವರೆಗೂ 240 ಅನಧಿಕೃತ  ದೇಶಿಯ ಪ್ರವಾಸಕ್ಕಾಗಿ  ಬಿಜೆಪಿ 1.4 ಕೋಟಿ ರೂಪಾಯಿಯನ್ನು ಭಾರತೀಯ ವಾಯುಪಡೆಗೆ ಪಾವತಿಸಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com