ಪಶ್ಚಿಮ ಬಂಗಾಳ: ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಕಾರಿನಿಂದ 1.13 ಲಕ್ಷ ನಗದು ವಶ

ಲೋಕಸಭಾ ಚುನಾವಣೆಗೆ ಇನ್ನೆರಡು ದಿನಗಳಿರುವಾಗ ಘಟಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಕಾರಿನಿಂದ 1.13 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

Published: 10th May 2019 12:00 PM  |   Last Updated: 10th May 2019 03:50 AM   |  A+A-


Rs 1.13 lakh seized from West Bengal BJP candidate Bharati Ghosh's car: Police

ಪಶ್ಚಿಮ ಬಂಗಾಳ: ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಕಾರಿನಿಂದ 1.13 ಲಕ್ಷ ನಗದು ವಶ

Posted By : SBV SBV
Source : The New Indian Express
ಪಶ್ಚಿಮ ಬಂಗಾಳ: ಲೋಕಸಭಾ ಚುನಾವಣೆಗೆ ಇನ್ನೆರಡು ದಿನಗಳಿರುವಾಗ ಘಟಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಕಾರಿನಿಂದ 1.13 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. 
 
ಮಾಜಿ ಐಪಿಎಸ್ ಅಧಿಕಾರಿ ತೆರಳುತ್ತಿದ್ದ ಕಾರನ್ನು ಪಿಂಗಳ ಪ್ರದೇಶದಲ್ಲಿ ಮಂಗಳಾ ಬಾರ್‌ ಸಮೀಪ ಪೊಲೀಸರು ತಪಾಸಣೆಗೊಳಪಡಿಸಿದ್ದರು. ಈ ವೇಳೆ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಹಣ ಕೊಂಡೊಯ್ಯುತ್ತಿದ್ದ ಬಗ್ಗೆ ವಿವರಣೆ ನೀಡುವುದಕ್ಕೆ ಭಾರತಿ ಘೋಷ್ ವಿಫಲರಾಗಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಘೋಷ್ ಅವರನ್ನು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ಪೂರ್ಣಗೊಂಡ ನಂತರ ಮಧ್ಯರಾತ್ರಿ 2.45 ರ ವೇಳೆಗೆ ಆಕೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಆ ಹಣವನ್ನು ನನ್ನ ವೈಯಕ್ತಿಕ ಖರ್ಚಿಗಾಗಿ ತೆಗೆದುಕೊಂಡು ಹೋಗುತ್ತಿದೆ. ಟಿಎಂಸಿ ಆರೋಪಿಸಿರುವಂತೆ ಬಳಕೆ ಮಾಡುವುದಕ್ಕೆ ಅಲ್ಲ, ನನ್ನ ಬಳಿ ಇದ್ದ ಹಣದಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಘೋಷ್ ಹೇಳಿದ್ದಾರೆ. ಚುನಾವಣಾ ಆಯೋಗಕ್ಕೆ ಇನ್ನಷ್ಟೇ ಈ ಬಗ್ಗೆ ದೂರು ದಾಖಲಾಗಬೇಕಿದೆ. 
Stay up to date on all the latest ದೇಶ news with The Kannadaprabha App. Download now
facebook twitter whatsapp