ಪಶ್ಚಿಮ ಬಂಗಾಳ: ಮತಗಟ್ಟೆಯಿಂದ ಹೊರದಬ್ಬಿ ಹಲ್ಲೆ ಯತ್ನ, ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಕಣ್ಣೀರು

ಲೋಕಸಭಾ ಚುನಾವಣೆಗೆ ದೇಶಾದ್ಯಂತ 6 ನೇ ಹಂತದ ಮತದಾನ ನಡೆಯುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಷ್ ಮೇಲೆ ಹಲ್ಲೆ ನಡೆಸಲು ಯತ್ನಿಸಿರುವ

Published: 12th May 2019 12:00 PM  |   Last Updated: 12th May 2019 02:23 AM   |  A+A-


Election 2019: BJP's Bharati Ghosh In Tears After Being Heckled At Poll Booth In Bengal

ಪಶ್ಚಿಮ ಬಂಗಾಳ: ಮತಗಟ್ಟೆಯಿಂದ ಹೊರದಬ್ಬಿ ಹಲ್ಲೆ ಯತ್ನ, ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಕಣ್ಣೀರು

Posted By : SBV SBV
Source : PTI
ಲೋಕಸಭಾ ಚುನಾವಣೆಗೆ ದೇಶಾದ್ಯಂತ 6 ನೇ ಹಂತದ ಮತದಾನ ನಡೆಯುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಷ್ ಮೇಲೆ ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ನಡೆದಿದೆ. 

ಮತಗಟ್ಟೆಯಿಂದ ನನ್ನನ್ನು ಹೊರದಬ್ಬಿದರು, ಹಲ್ಲೆಗೆ ಯತ್ನಿಸಿದರು ಎಂದು ಬಿಜೆಪಿ ಅಭ್ಯರ್ಥಿ ಘೋಷ್ ಕಣ್ಣೀರಿಟ್ಟಿದ್ದಾರೆ. ತೃಣಮೂಲ ಕಾಂಗ್ರೆಸ್ ನ ಮಹಿಳಾ ಕಾರ್ಯಕರ್ತರು ಭಾರತಿ ಘೋಷ್ ಅವರನ್ನು ಸುತ್ತುವರೆದಿದ್ದು, ಹಲ್ಲೆ ನಡೆಸಲು ಮುಂದಾಗಿದ್ದಾರೆ. ಭಾರತಿ ಘೋಷ್ ವಿರುದ್ಧ ಮತಗಟ್ಟೆಗೆ ತೆರಳಿ ಮೊಬೈಲ್ ಫೋನ್ ಮೂಲಕ ವಿಡಿಯೋ ತೆಗೆಯುವುದಕ್ಕೆ ಮುಂದಾದ ಆರೋಪವೂ ಕೇಳಿಬಂದಿದ್ದು, ಘಟನೆ ಬಗ್ಗೆ ಚುನಾವಣಾ ಆಯೋಗ ವರದಿ ಕೇಳಿದೆ. 

ನಾನು ಕ್ಷೇತ್ರದ ಅಭ್ಯರ್ಥಿ, ನಾನು ಮತಗಟ್ಟೆ ಪ್ರವೇಶಿಸಬಹುದು, ನನ್ನನ್ನು ನಿರ್ಬಂಧಿಸುವವರನ್ನೆಲ್ಲಾ ಬಂಧಿಸಬೇಕೆಂದು ಭಾರತಿ ಘೋಷ್ ಆಗ್ರಹಿಸಿದ್ದಾರೆ. 
Stay up to date on all the latest ದೇಶ news with The Kannadaprabha App. Download now
facebook twitter whatsapp