ಉಗ್ರಗಾಮಿಗಳನ್ನು ಕೊಲ್ಲಲು ಸೈನಿಕರು ಚು.ಆಯೋಗದ ಅನುಮತಿ ಪಡೆಯಬೇಕೆ?: ಪ್ರಧಾನಿ ನರೇಂದ್ರ ಮೋದಿ

ಉಗ್ರಗಾಮಿಗಳನ್ನು ಕೊಲ್ಲಲು ಸೇನೆ ಚುನಾವಣಾ ಆಯೋಗದ ಅನುಮತಿ ಪಡೆಯಬೇಕೆ ಎಂದು ಪ್ರಧಾನಿ...
ಉತ್ತರ ಪ್ರದೇಶದ ಕುಶಿನಗರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ
ಉತ್ತರ ಪ್ರದೇಶದ ಕುಶಿನಗರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಉಗ್ರಗಾಮಿಗಳನ್ನು ಕೊಲ್ಲಲು ಸೇನೆ ಚುನಾವಣಾ ಆಯೋಗದ ಅನುಮತಿ ಪಡೆಯಬೇಕೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉತ್ತರ ಪ್ರದೇಶದ ಕುಶಿನಗರ್ ನಲ್ಲಿ ರ್ಯಾಲಿಯಲ್ಲಿ ಕೇಳಿದ್ದಾರೆ.
ಇಂದು ಬೆಳಗ್ಗೆ ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಈ ಮಾತುಗಳನ್ನು ಹೇಳಿದ್ದಾರೆ.ಜಮ್ಮು-ಕಾಶ್ಮೀರದ ಏಳು ಲೋಕಸಭಾ ಕ್ಷೇತ್ರಗಳಿಗೆ ಕಳೆದ ವಾರ ಚುನಾವಣೆ ನಡೆದಿದೆ.
ಇಂದು ಕಾಶ್ಮೀರದಲ್ಲಿ ನಮ್ಮ ಸೇನಾ ಯೋಧರು ಉಗ್ರಗಾಮಿಗಳನ್ನು ಹೊಡೆದುರುಳಿಸಿದ್ದಾರೆ. ಮತದಾನ ನಡೆಯುವಾಗ ಮೋದಿಯವರು ಉಗ್ರರನ್ನು ಏಕೆ ಕೊಲ್ಲಿಸಿದರು ಎಂದು ಕೆಲವರು ಆತಂಕಗೊಂಡಿರಬಹುದು. ಸೈನಿಕರು ಬಾಂಬ್ ಮತ್ತು ಗನ್ ಗಳ ಮಧ್ಯೆ ನಿಂತಿರುವಾಗ ಉಗ್ರರನ್ನು ಕೊಲ್ಲಲು ಚುನಾವಣಾ ಆಯೋಗಕ್ಕೆ ಹೋಗಿ ಅಲ್ಲಿಂದ ಅನುಮತಿ ತೆಗೆದುಕೊಳ್ಳಬೇಕೆ? ನಾನು ಕಾಶ್ಮೀರಕ್ಕೆ ಬಂದಾಗಿನಿಂದ ಪ್ರತಿ ಎರಡು ಅಥವಾ ಮೂರು ದಿನಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತದೆ. ಇದು ನನ್ನ ಸ್ವಚ್ಛತಾ ಕಾರ್ಯಾಚರಣೆ ಎಂದು ಹೇಳಿದರು.
ಚುನಾವಣೆ ಪ್ರಕ್ರಿಯೆ ಇರುವಾಗ ಸೇನಾಪಡೆ ಉಗ್ರರತ್ತ ದಾಳಿ ಮಾಡುತ್ತಿದೆ ಎಂದು ಆರೋಪಿಸುತ್ತಾರೆ. ವಿರೋಧ ಪಕ್ಷದವರು ಏನು ನಾಟಕ ಮಾಡಲು ಹೊರಟಿದ್ದಾರೆ ಎಂದು ಮೋದಿ ಪ್ರಶ್ನಿಸಿದರು.
ಈ ಮಧ್ಯೆ ಲೋಕಸಭೆ ಚುನಾವಣೆ ಕದನ ಅಂತಿಮ ಹಂತ ತಲುಪಿದ್ದು ವಿರೋಧ ಪಕ್ಷಗಳು ಸೋಲುತ್ತವೆ ಎಂದು ಪ್ರಧಾನಿ ಮೋದಿ ಭವಿಷ್ಯ ನುಡಿದರು. ದೇಶದ ಜನರು ಸಮರ್ಥ ಸರ್ಕಾರವನ್ನು ತರಲಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com