ಮತ ಹಾಕದೆ ವಿಷಾದ ವ್ಯಕ್ತಪಡಿಸಿದ ದಿಗ್ವಿಜಯ್ ಸಿಂಗ್

ಮಧ್ಯಪ್ರದೇಶದ ರಾಜಘಡ ಜಿಲ್ಲೆಯಲ್ಲಿ ಮತ ಚಲಾಯಿಸುವಲ್ಲಿ ವಿಫಲರಾಗಿರುವ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.

Published: 13th May 2019 12:00 PM  |   Last Updated: 13th May 2019 11:59 AM   |  A+A-


Digvijay Singh

ದಿಗ್ವಿಜಯ್ ಸಿಂಗ್

Posted By : ABN ABN
Source : PTI
ಭೂಪಾಲ್ : ಮಧ್ಯಪ್ರದೇಶದ ರಾಜಘಡ  ಜಿಲ್ಲೆಯಲ್ಲಿ ಮತ ಚಲಾಯಿಸುವಲ್ಲಿ ವಿಫಲರಾಗಿರುವ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.

ರಾಜಘಡ  ರಾಜಧಾನಿ ಭೂಪಾಲ್ ನಿಂದ 130 ಕಿಲೋ ಮೀಟರ್ ದೂರದಲ್ಲಿದ್ದು, ದಿಗ್ವಿಜಯ್ ಸಿಂಗ್  ಭೂಪಾಲ್  ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಪ್ರಬಲ  ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಅಲ್ಲಿಗೆ ತೆರಳಲು  ಸಾಧ್ಯವಾಗದೆ  ಮತದಾನ ಮಾಡಿಲ್ಲ.

ರಾಜಘಡಕ್ಕೆ ತೆರಳಿ ಮತದಾನ ಮಾಡಲು ಸಾಧ್ಯವಾಗದಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಮುಂದಿನ ಬಾರಿ ಭೂಪಾಲ್ ನಲ್ಲಿಯೇ ಮತದಾನಕ್ಕೆ ನೋಂದಣಿ ಮಾಡಿಸಿಕೊಳ್ಳುತ್ತೇನೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಇಡೀ ದಿನ ಭೂಪಾಲ್ ನಲ್ಲಿನ ಮತಗಟ್ಟೆಗಳತ್ತ ಭೇಟಿ ನೀಡಿದ್ದರಿಂದ ಮತದಾನಕ್ಕೆ ತಪ್ಪಿಸಿಕೊಳ್ಳುವಂತಾಯಿತು ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ದಿಗ್ವಿಜಯ್ ಸಿಂಗ್ ದೇವಾಲಯದ ಹೊರಗಡೆ ಕಾಣಿಸಿಕೊಂಡಿದ್ದರು.

ಮತದಾನ ಮಾಡುವುದಕ್ಕೆ ಹೋಗುವಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಸೇರಿದಂತೆ ಹಲವು ಜನರು ಹೇಳಿದ್ದರೂ ದಿಗ್ವಿಜಯ್ ಸಿಂಗ್ ಮತದಾನ ಮಾಡಲು ಹೋಗಿರಲಿಲ್ಲ
Stay up to date on all the latest ದೇಶ news with The Kannadaprabha App. Download now
facebook twitter whatsapp