ಕೋಲ್ಕತಾದಲ್ಲಿ ಅಮಿತ್ ಶಾ ರೋಡ್ ಶೋಗೆ 10 ಸಾವಿರ ಕೆಜಿ ಚೆಂಡು ಹೂ ಬಳಕೆ, ರೈತರ ಮುಖದಲ್ಲಿ ಮಂದಹಾಸ!

ಶಾಹೀದ್ ಮಿನಾರ್ ರಿಂದ ಉತ್ತರ ಭಾಗದಲ್ಲಿರುವ ಸ್ವಾಮಿ ವಿವೇಕಾನಂದ್ ಅವರ ಮನೆಯವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೃಹತ್ ರೋಡ್ ಶೋ ನಡೆಸಲಿದ್ದು, ಈ ವೇಳೆ 10 ಸಾವಿರ ಕೆ.ಜಿ ಚೆಂಡು...
ಅಮಿತ್ ಶಾ
ಅಮಿತ್ ಶಾ
ಕೋಲ್ಕತಾ: ಶಾಹೀದ್ ಮಿನಾರ್ ರಿಂದ ಉತ್ತರ ಭಾಗದಲ್ಲಿರುವ ಸ್ವಾಮಿ ವಿವೇಕಾನಂದ್ ಅವರ ಮನೆಯವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೃಹತ್ ರೋಡ್ ಶೋ ನಡೆಸಲಿದ್ದು, ಈ ವೇಳೆ 10 ಸಾವಿರ ಕೆ.ಜಿ ಚೆಂಡು ಹೂ ಬಳಕೆ ಮಾಡಲು ಪಕ್ಷ ತೀರ್ಮಾನಿಸಿದೆ.  
ಕೋಲ್ಕತಾದ ಶಿಮ್ಲಾ ರಸ್ತೆಯ ಶಾಹೀದ್ ಮಿನಾರ್ ಮೈದಾನದಿಂದ ಸ್ವಾಮಿ ವಿವೇಕಾನಂದ್ ಅವರ ಮನೆಯವರೆಗೆ ಇಂದು ಸಂಜೆ 4 ಗಂಟೆಗೆ ನಡೆಯುವ ರೋಡ್ ಶೋದಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. 
ಆರು ಕಿಲೋ ಮಿಟರ್ ರೋಡ್ ಶೋನಲ್ಲಿ ಚೆಂಡು ಹೂ ಬಳಸಲು ನಿರ್ಧರಿಸಲಾಗಿದೆ. ಈ ಹಿಂದೆ ಸಿಪಿಐ(ಎಮ್) ಯ ಭದ್ರಕೋಟೆ ಮತ್ತು ಈಗ ಮಮತಾ ಬ್ಯಾನರ್ಜಿಯವರ ಪಕ್ಷದ ಭದ್ರ ನೆಲೆಯಾಗಿರುವ ರಾಜ್ಯದಲ್ಲಿ ಬಿಜೆಪಿ ರೋಡ್ ಶೋ ನಡೆಸುತ್ತಿರುವುದು ಎಲ್ಲರ ಚಿತ್ತ ಕದ್ದಿದೆ. 
ಹೌರಾ ಜಿಲ್ಲೆಯ ಪಕ್ಷದ ನಾಯಕ ಪ್ರತುಶ್ ಮೊಂಡಲ್, ಬಾಗನಾನ್  ಚೆಂಡು ಹೂವಿಗೆ ಪ್ರಸಿದ್ಧ ಪಡೆದ ಊರು. ಈ ಪ್ರದೇಶದಲ್ಲಿ ಚೆಂಡು ಹೂ ಬೆಳೆಯುತ್ತಾರೆ. 70 ರೈತರು ಮೂರು ದಿನಗಳ ಕಾಲ ಹೂ ಸಂಗ್ರಹಿಸಲು ಶ್ರಮಿಸಿದ್ದಾರೆ. 20 ಸಾವಿರ ಕೆ.ಜಿ ಹೂ ಸಂಗ್ರಹಿಸುವುದು ನಮ್ಮ ಇರಾದೆ ಆಗಿತ್ತು. ಆದರೆ ಹೂವಿನ ಹಂಗಾಮ ಅಲ್ಲದಿರುವುದರಿಂದ, 10 ಸಾವಿರ ಕೆ.ಜಿ ಮಾತ್ರ ಬಳೆಸಲು ಸಾಧ್ಯವಾಯಿತು ಎಂದಿದ್ದಾರೆ.
ಆದರೆ, ಚೆಂಡು ಹೂ ಬೆಳೆದ ರೈತರ ಜೇಬು ತುಂಬಿದೆ. ಈ ಅವಧಿಯಲ್ಲಿ ಚೆಂಡು ಹೂ ಬೇಡಿಕೆ ಅಧಿಕವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಪ್ರತುಶ್ ಮೊಂಡಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com