ಲೋಕಾ ಸಮರ 2019: ತೃತೀಯ ರಂಗಕ್ಕೆ ಅವಕಾಶವೇ ಇಲ್ಲ: ಎಂಕೆ ಸ್ಟಾಲಿನ್

ತೃತೀಯ ರಂಗಕ್ಕೆ ಯಾವುದೇ ರೀತಿಯ ಅವಕಾಶವಿಲ್ಲ. ಆದರೂ ಮೇ 23ರ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟನೆ ದೊರೆಯಲಿದೆ ಎಂದು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ತೃತೀಯ ರಂಗಕ್ಕೆ ಯಾವುದೇ ರೀತಿಯ ಅವಕಾಶವಿಲ್ಲ. ಆದರೂ ಮೇ 23ರ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟನೆ ದೊರೆಯಲಿದೆ ಎಂದು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ಹಾಲಿ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ತೃತೀಯ ರಂಗದ ಕುರಿತ ಚರ್ಚೆ ಆರಂಭವಾಗಿದ್ದು, ಇದಕ್ಕೆ ತೆಲಂಗಾಣ ಸಿಎಂ ಹಾಗೂ ಟಿಆರ್ ಎಸ್ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಅವರ ಇತ್ತೀಚಿನ ನಡೆಗಳು ಕಾರಣವಾಗಿತ್ತು. ಎನ್ ಡಿಎ ಯೇತರ ಪಕ್ಷಗಳನ್ನು ಭೇಟಿ ಮಾಡುತ್ತಿದ್ದ ಕೆಸಿಆರ್ ತೃತೀಯ ರಂಗದ ಚರ್ಚೆಗೆ ಕಾರಣವಾಗಿದ್ದರು. ಆದರೆ ಇದಕ್ಕೆ ಇದೀಗ ಸ್ಪಷ್ಟನೆ ನೀಡಿರುವ ಡಿಎಂಕೆ ಮುಖ್ಯಸ್ಥ ಎಂಕೆ ಸ್ಚಾಲಿನ್ ಅವರು, ತೃತೀಯ ರಂಗಕ್ಕೆ ಅವಕಾಶವೇ ಇಲ್ಲ ಎಂದು ಹೇಳಿದ್ದಾರೆ.
ಕೆಸಿಆರ್ ಅವರ ತಮಿಳುನಾಡು ಭೇಟಿ ಕುರಿತು ಮಾತನಾಡಿದ ಅವರು, ಬಹುಶಃ ಕೆಸಿಆರ್ ಅವರು ದೇಗುಲಗಳ ಭೇಟಿಗಾಗಿ ತಮಿಳುನಾಡಿಗೆ ಬಂದಿರಬೇಕು. ರಾಜಕೀಯ ಉದ್ದೇಶದಿಂದಲ್ಲ. ಅವರ ನನ್ನ ಭೇಟಿಯಲ್ಲಿ ಯಾವುದೇ ರಾಜಕೀಯದ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ತೃತೀಯ ರಂಗದ ಕುರಿತು ಮಾತನಾಡಿದ ಅವರು, ನನ್ನ ಪ್ರಕಾರ ತೃತೀಯ ರಂಗಕ್ಕೆ ಯಾವುದೇ ರೀತಿಯ ಅವಕಾಶವಿಲ್ಲ. ಆದರೂ ಮೇ 23ರ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟನೆ ದೊರೆಯಲಿದೆ ಎಂದು ಸ್ಟಾಲಿನ್ ಸ್ಪಷ್ಟ ಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com