ರಾಜಕೀಯ ಪಕ್ಷಗಳ ದೊಂಬರಾಟಕ್ಕೆ ಬೇಸತ್ತು ಚುನಾವಣಾ ಪ್ರಚಾರಗಳನ್ನೇ ನಿಲ್ಲಿಸಿದ ಚುನಾವಣಾ ಆಯೋಗ

ಪಶ್ಚಿಮ ಬಂಗಾಳದ 9 ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾಳೆಯಿಂದ ಚುನಾವಣೆ ಮುಗಿಯುವವರೆಗೂ ಪ್ರಚಾರವನ್ನು ಚುನಾವಣಾ ಆಯೋಗ ರದ್ದುಗೊಳಿಸಿದೆ.
ಚಂದ್ರ ಭೂಷಣ್ ಕುಮಾರ್
ಚಂದ್ರ ಭೂಷಣ್ ಕುಮಾರ್

ನವದೆಹಲಿ:  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆಯಲ್ಲಿ ಹಿಂಸಾಚಾರ ಸಂಭವಿಸಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ 9 ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾಳೆಯಿಂದ ಚುನಾವಣೆ ಮುಗಿಯುವವರೆಗೂ ಪ್ರಚಾರವನ್ನು ಚುನಾವಣಾ ಆಯೋಗ ಸ್ಥಗಿತಗೊಳಿಸಿದೆ.

ದೂಮ್ ದೂಮ್, ಬರಾಸತ್, ಬಸಿರ್ಹಾಟ್, ಜಯ್ ನಗರ, ಮಥುರಾಪುರ,  ಜಾಧವ್ ಪುರ್, ಡೈಮಂಡ್ ಹಾರ್ಬೂರ್,  ಉತ್ತರ ಮತ್ತು ದಕ್ಷಿಣ ಕೊಲ್ಕತ್ತಾದಲ್ಲಿ ಚುನಾವಣಾ ಪ್ರಚಾರ ನಡೆಸಿದಂತೆ ಚುನಾವಣಾ ಆಯೋಗ ಕಠಿಣ ನಿರ್ಧಾರ ಕೈಗೊಂಡಿದೆ.

ಇದೇ ಮೊದಲ ಬಾರಿಗೆ ವಿಧಿ 324ನೇ ವಿಧಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.  ವಿದ್ಯಾಸಾಗರ್ ಪ್ರತಿಮೆ ಧ್ವಂಸಕ್ಕೆ ಚುನಾವಣಾ ಆಯೋಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಧ್ವಂಸಗೊಳಿಸಿದರನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು  ಉಪ ಚುನಾವಣಾ ಆಯುಕ್ತರಾದ ಚಂದ್ರ ಭೂಷಣ್ ಕುಮಾರ್ ಹೇಳಿದ್ದಾರೆ

ಪಶ್ಚಿಮ ಬಂಗಾಳ ಸಿಇ ಒ ನಿರ್ದಶನದ ಮೇರೆಗೆ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಎಡಿಜಿ ಸಿಐಡಿ ರಾಜೀವ್ ಕುಮಾರ್   ಹಾಗೂ ಪಶ್ಚಿಮ ಬಂಗಾಳದ ಗೃಹ ಮತ್ತು ಆರೋಗ್ಯ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿಯನ್ನು ಕೂಡಲೇ ಜಾರಿಗೆ ಬರುವಂತೆ ಆ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com