ಚುನಾವಣಾ ಆಯೋಗದ ಸಮಗ್ರತೆ ಅಪಾಯದಲ್ಲಿದೆ: ಚಂದ್ರಬಾಬು ನಾಯ್ಡು

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರವನ್ನು ನಿಗದಿತ ಅವಧಿಗೂ ಒಂದು ದಿನ ಮೊದಲೇ ಅಂತ್ಯಗೊಳಿಸಿರುವುದಕ್ಕೆ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗದ ಸಮಗ್ರತೆ ಅಪಾಯದಲ್ಲಿದೆ: ಚಂದ್ರಬಾಬು ನಾಯ್ಡು
ಚುನಾವಣಾ ಆಯೋಗದ ಸಮಗ್ರತೆ ಅಪಾಯದಲ್ಲಿದೆ: ಚಂದ್ರಬಾಬು ನಾಯ್ಡು
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರವನ್ನು ನಿಗದಿತ ಅವಧಿಗೂ ಒಂದು ದಿನ ಮೊದಲೇ ಅಂತ್ಯಗೊಳಿಸಿರುವುದಕ್ಕೆ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಚುನಾವಣಾ ಆಯೋಗದ ಕ್ರಮವನ್ನು ಅಡಚಣೆ ಎಂದು ಹೇಳಿರುವ ಚಂದ್ರಬಾಬು ನಾಯ್ಡು, ಆಯೋಗದ ಸಮಗ್ರತೆ ಅಪಾಯದಲ್ಲಿದೆ. 
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದ ಅವಧಿಯನ್ನು ಮೊಟಕುಗೊಳಿಸಿರುವುದು ತೊಂದರೆಯಾಗಿದೆ. ಬಿಜೆಪಿ ಅಧ್ಯಕ್ಷರ ಆರೋಪವನ್ನು ಪುರಸ್ಕರಿಸಿರುವ ಆಯೋಗ, ತೃಣಮೂಲ ಕಾಂಗ್ರೆಸ್ ನ ದೂರನ್ನು ಪರಿಗಣಿಸಿಲ್ಲ ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. 
ಪ್ರಧಾನಿ ಮೋದಿಗೆ ಕ್ಲೀನ್ ಚಿಟ್ ಕೊಡುವುದು, ಬಿಜೆಪಿ ನೀಡುವ ಸುಳ್ಳು ದೂರನ್ನು ಆಧರಿಸಿ ಕ್ರಮ ಕೈಗೊಳ್ಳುತ್ತಿರುವುದು ಹಾಗೂ ಪ್ರತಿಪಕ್ಷಗಳ ದೂರನ್ನು ಆಲಿಸದೇ ಇರುವುದು ಚುನಾವಣಾ ಆಯೋಗದ ನಿಷ್ಪಕ್ಷಪಾತ ಹಾಗೂ ಸಮಗ್ರತೆಯ ಬಗ್ಗೆ ಅನುಮಾನ ಹುಟ್ಟಿಸುತ್ತಿದೆ ಎಂದು ನಾಯ್ಡು ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com