ಮೇ 23 ರಂದು ಮೋದಿ ಬೈ ಬೈ- ರಾಹುಲ್ ಗಾಂಧಿ

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತನಾಡದೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ವಹಿಸಿದ್ದಾರೆ. ಆದರೆ, ಮೇ 23 ರಂದು ಬೈ ಬೈ ಹೇಳಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

Published: 16th May 2019 12:00 PM  |   Last Updated: 16th May 2019 08:37 AM   |  A+A-


Rahul Gandhi

ರಾಹುಲ್ ಗಾಂಧಿ

Posted By : ABN ABN
Source : PTI
ನವದೆಹಲಿ: ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತನಾಡದೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ವಹಿಸಿದ್ದಾರೆ. ಆದರೆ, ಅವರನ್ನು ತಪ್ಪಿಸಿಕೊಳ್ಳಲು ನಾವು ಬಿಡುವುದಿಲ್ಲ  ಮೇ 23 ರಂದು ಮೋದಿ ಬೈ ಬೈ ಹೇಳಿದ್ದಾರೆ  ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಪಾಟಲಿಪುತ್ರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ ನೀಡಿದ್ದ  ಎಲ್ಲಾ ಬಡವರ ಖಾತೆಗಳಿಗೆ 15 ಲಕ್ಷ ಹಣ ಹಾಗೂ ಎರಡು ಕೋಟಿ ಉದ್ಯೋಗ ಸೃಷ್ಟಿ ಭರವಸೆಗಳು ಏನಾದವೂ ಎಂದು ಪ್ರಶ್ನಿಸಿದರು.

ಐದು ವರ್ಷಗಳ ಅಧಿಕಾರವಧಿಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿರುವ ಮೋದಿ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಮೇ 23 ರಂದು ನಡೆಯಲಿರುವ ಮತ ಎಣಿಕೆ ಸಂದರ್ಭದಲ್ಲಿ ಜನರು ಉತ್ತರ ನೀಡಲಿದ್ದಾರೆ ಎಂದರು.

ಮೋದಿ ಅವರ ಸುಳ್ಳುಗಳು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದುಕೊಂಡಿವೆ. ವೆಬ್ ಸೈಟ್ ವೊಂದರಲ್ಲಿ  ಮೋದಿಯ ಸುಳ್ಳುಗಳ ಕೈಪಿಡಿಯನ್ನು ಪ್ರಕಟಿಸಲಾಗಿದೆ .  ರಾಫೆಲ್ ಒಪ್ಪಂದ ಸೇರಿದಂತೆ  ಅನೇಕ ವಿಷಯಗಳಲ್ಲಿ ಮೋದಿ  ಸುಳ್ಳುಗಳನ್ನು ಹೇಳಿದ್ದಾರೆ ಎಂದು  ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಮೋದಿ ಸುಳ್ಳು ಎಂಬ ಹೊಸ ಪದ ಡಿಕ್ಸನರಿಯಲ್ಲಿ ಹುಟ್ಟುಕೊಂಡಿದೆ ಎಂದು ಹೇಳಿರುವ ರಾಹುಲ್ ಗಾಂಧಿ, ಈ ಪದದ ಬಗ್ಗೆ ವಿವರಣೆಯುಳ್ಳು ಇಂಗ್ಲಿಷ್ ಡಿಕ್ಸನರಿಯ ಪೋಟೋಶಾಪ್ ಮಾಡಿದ ಪೇಜ್ ವೊಂದರ ಸ್ಕ್ರೀನ್ ಶಾಟ್ ನ್ನು ಟ್ವೀಟ್ ಮಾಡಿದ್ದಾರೆ.


ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮೋದಿ ಜೊತೆಗೆ ಬಹಿರಂಗ ಚರ್ಚೆಗೆ ಈಗಲೂ ಬದ್ಧನಾಗಿದ್ದೇನೆ. ಮೋದಿ 23ರಂದು ಮೋದಿ ಬೈ ಬೈ ಹೇಳಲಿದ್ದಾರೆ ಎಂದು  ರಾಹುಲ್ ಗಾಂಧಿ ಹೇಳಿದ್ದಾರೆ
Stay up to date on all the latest ದೇಶ news with The Kannadaprabha App. Download now
facebook twitter whatsapp