ಯುಪಿಎ-3 ರಚನೆ?: ಪ್ರಮುಖ ಪ್ರತಿಪಕ್ಷಗಳ ಸಭೆಗೆ ಸೋನಿಯಾ ಗಾಂಧಿ ತಯಾರಿ!

ಮುಂದಿನ ವಾರ ಈ ವೇಳೆಗೆ ಚುನಾವಣೆಯ ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಿರಲಿದೆ. ಅಷ್ಟರಲ್ಲೆ ಕೇಂದ್ರದಲ್ಲಿ ಅಧಿಕಾರದ ಸೂತ್ರ ಹಿಡಿಯಲು...

Published: 16th May 2019 12:00 PM  |   Last Updated: 16th May 2019 03:55 AM   |  A+A-


UPA 3 in the making? Sonia reaches out to key opposition leaders

ಯುಪಿಎ-3 ಕ್ಕೆ ತಯಾರಿಯಾ?: ಪ್ರತಿಪಕ್ಷಗಳ ಸಭೆ ಕರೆದ ಸೋನಿಯ!

Posted By : SBV SBV
Source : The New Indian Express
ನವದೆಹಲಿ: ಮುಂದಿನ ವಾರ ಈ ವೇಳೆಗೆ ಚುನಾವಣೆಯ ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಿರಲಿದೆ. ಅಷ್ಟರಲ್ಲೆ ಕೇಂದ್ರದಲ್ಲಿ ಅಧಿಕಾರದ ಸೂತ್ರ ಹಿಡಿಯಲು ವಿಪಕ್ಷಗಳು ಈಗಾಗಲೇ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿವೆ. 

ಮೆ.23 ರಂದು ಪ್ರಕಟಗೊಳ್ಳುವ ಫಲಿತಾಂಶದ ನಂತರ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನವದೆಹಲಿಯಲ್ಲಿ ವಿಪಕ್ಷಗಳ ಸಭೆಯನ್ನು ಕರೆದಿದ್ದಾರೆ. 

ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನ ಬಂದಿರುವುದನ್ನು ಸ್ಪಷ್ಟಪಡಿಸಿರುವ ಡಿಎಂಕೆ, ತನ್ನ  ನಾಯಕ ಎಂಕೆ ಸ್ಟ್ಯಾಲಿನ್ ಆಹ್ವಾನವನ್ನು ಸ್ವೀಕರಿಸಿದ್ದಾರೆಂದು ಹೇಳಿದೆ. 

ಚುನಾವಣಾ ಪ್ರಚಾರದಿಂದ ಅಂತರ ಕಾಯ್ದುಕೊಂಡಿರುವ ಸೋನಿಯಾ ಗಾಂಧಿ, ಜೆಡಿಎಸ್, ಎನ್ ಸಿಪಿ, ಎಸ್ ಪಿ, ಬಿಎಸ್ ಪಿ ಪಕ್ಷಗಳ ನಾಯಕರಿಗೂ ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ.
 
ಇದೇ ವೇಳೆ ಟಿಆರ್ ಎಸ್ ನ ನಾಯಕ ಕೆ.ಚಂದ್ರಶೇಖರ್ ರಾವ್, ಬಿಜು ಜನತಾದಳದ ನವೀನ್ ಪಟ್ನಾಯಕ್, ವೈಎಸ್ಆರ್ ಕಾಂಗ್ರೆಸ್ ನ ಜಗನ್ ಮೋಹನ್ ರೆಡ್ಡಿ ಅವರನ್ನೂ ಸಭೆಗೆ ಆಹ್ವಾನಿಸಿರುವುದು ಬಹಿರಂಗವಾಗಿದೆ.
Stay up to date on all the latest ದೇಶ news with The Kannadaprabha App. Download now
facebook twitter whatsapp