ವಿದ್ಯಾಸಾಗರ್ ಪ್ರತಿಮೆ ಮರುನಿರ್ಮಾಣಕ್ಕೆ ಬಿಜೆಪಿ ಹಣ ಬೇಡ: ಮೋದಿ ವಿರುದ್ಧ ಮತ್ತೆ ಹರಿಹಾಯ್ದ ಮಮತಾ ಬ್ಯಾನರ್ಜಿ

ಕೋಲ್ಕತ್ತಾದ ಅಮಿತ್ ಶಾ ರೋಡ್ ಶೋ ವೇಳೆ ಕೋಲ್ಕತ್ತಾ ಕಾಲೇಜಿನ ಆವರಣದಲ್ಲಿದ್ದ ವಿದ್ಯಾಸಾಗರ್ ಪ್ರತಿಮೆ ದ್ವಂಸವಾಗಿದ್ದು ಇದರ ಪುನರ್ ನಿರ್ಮಾಣಕ್ಕೆ ಬಿಜೆಪಿ ಹಣದ ಅಗತ್ಯವಿಲ್ಲ
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
ಮಂದಿರ್ ಬಕಾರ್: ಕೋಲ್ಕತ್ತಾದ ಅಮಿತ್ ಶಾ ರೋಡ್ ಶೋ ವೇಳೆ ಕೋಲ್ಕತ್ತಾ ಕಾಲೇಜಿನ ಆವರಣದಲ್ಲಿದ್ದ ವಿದ್ಯಾಸಾಗರ್ ಪ್ರತಿಮೆ ದ್ವಂಸವಾಗಿದ್ದು ಇದರ ಪುನರ್ ನಿರ್ಮಾಣಕ್ಕೆ ಬಿಜೆಪಿ ಹಣದ ಅಗತ್ಯವಿಲ್ಲ, ಬಂಗಾಳದಲ್ಲೇ ಸಾಕಷ್ತು ಸಂಪನ್ಮೂಲವಿದೆ ಎಂದು ಗುರುವಾರ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದಕ್ಕೆ ಮುನ್ನ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ತಮ್ಮ ರ್ಯಾಲಿಯೊಂದರಲ್ಲಿ ಬಂಗಾಳದಲ್ಲಿ ಧ್ವಂಸವಾಗಿರುವ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಮರುಸ್ಥಾಪನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು.
ಗುರುವಾರ ಈ ಸಂಬಂಧ ತಮ್ಮ ಪಕ್ಷದ ರ್ಯಾಲಿಯೊಂದರಲ್ಲಿ ಮಾತನಾಡಿದ ಮಮತಾ "ಕೋಲ್ಕತ್ತಾದಲ್ಲಿ ವಿದ್ಯಾಸಾಗರ ಪ್ರತಿಮೆಯನ್ನು ಪುನರ್ನಿರ್ಮಾಣ ಮಾಡಲು ಮೋದಿ ಭರವಸೆ ನಿಡಿದ್ದಾರೆ.ಆದರೆ ನಮಗೆ ಅವರ (ಬಿಜೆಪಿ) ಹಣ ಬೇಕಾಗಿಲ್ಲ. ಪ್ರತಿಮೆ ಮರುನಿರ್ಮಾಣಕ್ಕೆ ರಾಜ್ಯದಲ್ಲೇ ಸಾಕಷ್ಟು ಸಮ್ಪನ್ಮೂಲಗಳಿದೆ" ಎಂದಿದ್ದಾರೆ.
"ಪ್ರತಿಮೆ ಧ್ವಂಸಗೊಳಿಸುವುದು ಬಿಜೆಪಿಯ ಸಂಪ್ರದಾಯದಲ್ಲಿ ಒಂದಾಗಿದೆ. ತ್ರಿಪುರಾದಲ್ಲಿ ಸಹ ಆ ಪಕ್ಷ ಹೀಗೆಯೇ ಮಾಡಿದೆ. ಪಶ್ಚಿಮ ಬಂಗಾಳದ 200 ವರ್ಷಗಳ ಹಳೆಯ ಪರಂಪರೆಯನ್ನು ಬಿಜೆಪಿ ನಾಶಪಡಿಸಿದೆ" ಮಮತಾ ಹೇಳಿದ್ದಾರೆ.
"ಬಿಜೆಪಿ ಜನರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ ಮತ್ತು ಸಾಮಾಜಿಕ ಮಾಧ್ಯಮದ ನಕಲಿ ಪೋಸ್ಟ್ ಗಳ ಮೂಲಕ ಜನರ ನಡುವೆ ಗಲಭೆಗಳನ್ನು ಹುಟ್ಟಿಸುತ್ತಿದೆ." ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com