ಆಲ್ ಇಂಡಿಯಾ ರೇಡಿಯೋದಲ್ಲಿ ಮತ ಎಣಿಕೆ ವಿಸ್ತೃತ ವರದಿ, 40 ಗಂಟೆಗಳ ವಿಶೇಷ ಪ್ರಸಾರ

ಹಾಲಿ ಲೋಕಸಭಾ ಚುನಾವಣೆಯ ಫಲಿತಾಂಶದ ವಿಸ್ಮೃತ ವರದಿಯನ್ನು ಸರ್ಕಾರಿ ಸ್ವಾಮ್ಯದ ಆಲ್‌ ಇಂಡಿಯಾ ರೇಡಿಯೊ ಪ್ರಸಾರ ಮಾಡಲಿದ್ದು, ಇದಕ್ಕಾಗಿ 40 ಗಂಟೆಗಳ ವಿಶೇಷ ನೇರ ಪ್ರಸಾರ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಹಾಲಿ ಲೋಕಸಭಾ ಚುನಾವಣೆಯ ಫಲಿತಾಂಶದ ವಿಸ್ಮೃತ ವರದಿಯನ್ನು ಸರ್ಕಾರಿ ಸ್ವಾಮ್ಯದ ಆಲ್‌ ಇಂಡಿಯಾ ರೇಡಿಯೊ ಪ್ರಸಾರ ಮಾಡಲಿದ್ದು, ಇದಕ್ಕಾಗಿ 40 ಗಂಟೆಗಳ ವಿಶೇಷ ನೇರ ಪ್ರಸಾರ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಬಗ್ಗೆ ಸ್ವತಃ ಆಲ್ ಇಂಡಿಯಾ ರೇಡಿಯೋ ಪ್ರಕಟಣೆ ನೀಡಿದ್ದು, ಎಐಆರ್ ಇದೇ ಮೇ.23ರಂದು ಲೋಕಸಭೆ ಮತ್ತು 4 ರಾಜ್ಯಗಳ ವಿಧಾನ ಸಭಾ ಚುನಾವಣಾ ಫಲಿತಾಂಶಗಳ ಅಧಿಕೃತ ಮತ್ತು ಕ್ಷಣಕ್ಷಣದ ಮಾಹಿತಿಯ ವರದಿ ಬಿತ್ತರಿಸಲು ವಿಸ್ತೃತ ಪೂರ್ವಸಿದ್ಧತೆ ಮಾಡಿಕೊಂಡಿರುವುದಾಗಿ ಹೇಳಿದೆ.
ದೇಶದ ಬೃಹತ್‌ ರೇಡಿಯೊ ಜಾಲವೆನಿಸಿರುವ ಎಐಆರ್‌, ಇದೇ ಮೊದಲ ಬಾರಿಗೆ ನಿರಂತರವಾಗಿ 40 ಗಂಟೆಗಳ ಚುನಾವಣಾ ಫಲಿತಾಂಶ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಎಐಆರ್‌, ‘ವಿಶೇಷ ಜನಾದೇಶ 2019’ ಎಂಬ ಕಾರ್ಯಕ್ರಮವನ್ನು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಮೇ.23ರ ಬೆಳಿಗ್ಗೆ 7ರಿಂದ ಮೇ.24ರ ರಾತ್ರಿ 11 ಗಂಟೆಯವರೆಗೆ ಪ್ರಸಾರ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ. ಈ ವೇಳೆ ಎಐಆರ್ ಸ್ಟುಡಿಯೋದಲ್ಲಿನ ತಜ್ಞರು ಜನರಿಗೆ ವರದಿ ಮತ್ತು ವಿಶ್ಲೇಷಣೆ ನೀಡಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com