ನೀತಿ ಸಂಹಿತೆ ನಿರ್ವಹಣೆ: ಚುನಾವಣಾ ಆಯೋಗದಲ್ಲಿ ಬಿರುಕು?: ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಿಷ್ಟು!

ಚುನಾವಣಾ ನೀತಿ ಸಂಹಿತೆ ನಿರ್ವಹಣೆ ವಿಚಾರವಾಗಿ ಚುನಾವಣಾ ಆಯೋಗದಲ್ಲಿ ಆಂತರಿಕ ಕಲಹ ಉಂಟಾಗಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಸ್ಪಷ್ಟಪಡಿಸಿದ್ದಾರೆ.
ನೀತಿ ಸಂಹಿತೆ ನಿರ್ವಹಣೆ: ಚುನಾವಣಾ ಆಯೋಗದಲ್ಲಿ ಬಿರುಕು?: ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಿಷ್ಟು!
ನೀತಿ ಸಂಹಿತೆ ನಿರ್ವಹಣೆ: ಚುನಾವಣಾ ಆಯೋಗದಲ್ಲಿ ಬಿರುಕು?: ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಿಷ್ಟು!
ನವದೆಹಲಿ: ಚುನಾವಣಾ ನೀತಿ ಸಂಹಿತೆ ನಿರ್ವಹಣೆ ವಿಚಾರವಾಗಿ ಚುನಾವಣಾ ಆಯೋಗದಲ್ಲಿ ಆಂತರಿಕ ಕಲಹ ಉಂಟಾಗಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಸ್ಪಷ್ಟಪಡಿಸಿದ್ದಾರೆ. 
ಚುನಾವಣಾ ಆಯೋಗದ ಮೂವರು ಸದಸ್ಯರು ಒಂದೇ ರೀತಿ ಇರುವುದಕ್ಕೆ ಸಾಧ್ಯವಿಲ್ಲ ಎಂದು ಇದೇ ವೇಳೆ ಸುನಿಲ್ ಅರೋರಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ಭಾಷಣಗಳ ವಿರುದ್ಧ ದಾಖಲಾಗಿದ್ದ ಉಲ್ಲಂಘನೆಯ ದೂರುಗಳಿಗೆ  ಆಯೋಗ ಹಲವು ಬಾರಿ ಕ್ಲೀನ್ ಚಿಟ್ ನೀಡಿತ್ತು. ಇದಕ್ಕೆ ಅಶೋಕ್ ಲಾವಸ ವಿರೋಧ ವ್ಯಕ್ತಪಡಿಸಿದ್ದರೂ  ಅದನ್ನು ಪರಿಗಣಿಸಲಾಗಿರಲಿಲ್ಲ. 
ಈ ಬೆನ್ನಲ್ಲೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ವಿಷಯವಾಗಿ ನಿರ್ಧರಿಸುವುದಕ್ಕೆ ಆಯೋಗದ ಪೂರ್ಣಪ್ರಮಾಣದ ಸಭೆಗಳಲ್ಲಿ ಭಾಗವಹಿಸುವುದರಿಂದ ದೂರ ಉಳಿಯುವುದಾಗಿ  ಚುನಾವಣಾ ಆಯುಕ್ತ ಅಶೋಕ್ ಲವಾಸ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ನಿರ್ವಹಣೆಯ ವಿಷಯವಾಗಿ  ಚುನಾವಣಾ ಆಯೋಗದಲ್ಲಿ ಬಿರುಕು ಮೂಡಿದೆ ಎಂಬ ವರದಿ ಪ್ರಕಟವಾಗಿತ್ತು. 
ತಮ್ಮ ನಿರ್ಧಾರಗಳನ್ನೂ ಆಯೋಗದ ಆದೇಶಗಳಲ್ಲಿ ಸೇರಿಸುವುದಾದರೆ ಮಾತ್ರ ಸಭೆಗೆ ಹಾಜರಾಗುವುದಾಗಿ ಅಶೋಕ್ ಲವಾಸ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com