7 ನೇ ಹಂತದ ಮತದಾನ: ಟಿಎಂಸಿ ಕಾರ್ಯಕರ್ತರಿಂದ ಬಿಜೆಪಿಯ ಬಾಬುಲ್ ಸುಪ್ರಿಯೋ ಮೇಲೆ ದಾಳಿ!

ಕೊನೆಯ ಹಂತದ ಚುನಾವಣೆಯಲ್ಲಿ ದೇಶಾದ ಒಟ್ಟು 59 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಅಹಿತಕರ ಘಟನೆಗಳು ವರದಿಯಾಗಿದೆ.

Published: 19th May 2019 12:00 PM  |   Last Updated: 19th May 2019 01:28 AM   |  A+A-


TMC cadres attack BJP's Babul Supriyo, Tej Pratap's security guard heckles media persons

7 ನೇ ಹಂತದ ಮತದಾನ: ಟಿಎಂಸಿ ಕಾರ್ಯಕರ್ತರಿಂದ ಬಿಜೆಪಿಯ ಬಾಬುಲ್ ಸುಪ್ರಿಯೋ ಮೇಲೆ ದಾಳಿ!

Posted By : SBV SBV
Source : Online Desk
ಪ.ಬಂಗಾಳ/ ಬಿಹಾರ: ಕೊನೆಯ ಹಂತದ  ಚುನಾವಣೆಯಲ್ಲಿ ದೇಶಾದ ಒಟ್ಟು 59 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಅಹಿತಕರ ಘಟನೆಗಳು ವರದಿಯಾಗಿದೆ. 

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದ್ದು, ಬಿಜೆಪಿಯ ಬಾಬುಲ್ ಸುಪ್ರಿಯೋ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. 

7 ನೇ ಹಂತದ ಚುನಾವಣೆಯಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಧಾನಿ ನರೇಂದ್ರ ಮೋದಿಯೂ ಸೇರಿದಂತೆ ಒಟ್ಟು 918 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದ್ದು, 10.1 ಕೋಟಿ ಜನರು ಮತದಾನ ಮಾಡಲಿದ್ದಾರೆ. 

ಇದೇ ವೇಳೆ ಬಿಹಾರದಲ್ಲಿಯೂ ಹಿಂಸಾಚಾರದ ವರದಿಗಳಾಗಿದ್ದು, ಆರ್ ಜೆಡಿಯ ತೇಜ್ ಪ್ರತಾಪ್ ಯಾದವ್ ನ ಭದ್ರತಾ ಗಾರ್ಡ್ ಗಳು ಮಾಧ್ಯಮದವರನ್ನು ತಳ್ಳಿ, ವಾಗ್ದಾಳಿ ನಡೆಸಿದ್ದಾರೆ. 
Stay up to date on all the latest ದೇಶ news with The Kannadaprabha App. Download now
facebook twitter whatsapp