ಬಿಜೆಪಿಯೇತರ ಸರ್ಕಾರ ರಚನೆ ಸಿದ್ಧತೆ?; 21 ವಿಪಕ್ಷ ನಾಯಕರೊಂದಿಗೆ ಚು.ಆಯೋಗ ಭೇಟಿ ಮಾಡಲಿರುವ ಚಂದ್ರಬಾಬು ನಾಯ್ಡು

ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಮಹತ್ವದ ಹೆಜ್ಜೆಗೆ ಮುಂದಾಗಿದ್ದು. ಎಲ್ಲ 21 ವಿಪಕ್ಷ ನಾಯಕರೊಂದಿಗೆ ಸೇರಿ ಮಂಗಳವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಅಂತಿಮ ಹಂತದ ಮತದಾನ ಮುಕ್ತಾಯವಾಗಿ, ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗವಾದ ಬೆನ್ನಲ್ಲೇ ರಾಷ್ಟ್ರ ರಾಜಕಾರಣ ಮತ್ತೆ ಗರಿಗೆದರಿದೆ. ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಮಹತ್ವದ ಹೆಜ್ಜೆಗೆ ಮುಂದಾಗಿದ್ದು. ಎಲ್ಲ 21 ವಿಪಕ್ಷ ನಾಯಕರೊಂದಿಗೆ ಸೇರಿ ಮಂಗಳವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ಸಂಸ್ಥೆ ವರದಿ ಮಾಡಿರುವಂತೆ ನಾಳೆ ಮಧ್ಯಾಹ್ನ ಮೂರು ಗಂಟೆಗೆ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ವಿಪಕ್ಷಗಳ ನಿಯೋಗ ಕೇಂದ್ರ ಚುನಾವಣಾ ಆಯೋಗವನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. 
ಈ ಹಿಂದೆ ಮಾತನಾಡಿದ್ದ ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆ ಸಂಬಂಧ ಎಲ್ಲಾ ಪ್ರತಿಕ್ಷಗಳನ್ನು ಒಂದೇ ವೇದಿಕೆಗೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವುದಾಗಿ ನಾಯ್ಡು ಹೇಳಿದ್ದರು. ಅದೇ ರೀತಿ ನಾಯ್ಡು ಇದೀಗ ಎಲ್ಲ 21 ವಿಪಕ್ಷಗಳ ಮುಖಂಡರನ್ನು ಭೇಟಿಯಾಗಿದ್ದು, ನಾಳೆ ಮಧ್ಯಾಹ್ನ ಚುನಾವಣಾ ಆಯೋಗದಗೊಂದಿಗೆ ಚರ್ಚೆ ನಡೆಸಲಿದ್ದಾರೆ.  
ಅಂತೆಯೇ ರಾಷ್ಟ್ರಪತಿ ಕೋವಿಂದ್ ಅವರ ಭೇಟಿ ಮಾಡಲಿರುವ ವಿಪಕ್ಷಗಳ ನಿಯೋಗ, ಏಕೈಕ ದೊಡ್ಡ ಪಕ್ಷಕ್ಕೆ ಅಲ್ಲದೇ, ಬಹುಮತ ಇರುವ ಮೈತ್ರಿಕೂಟಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡುವ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಇದಕ್ಕೆ ಗೋವಾ, ಕರ್ನಾಟಕದ ಉದಾಹರಣೆ ನೀಡಲಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com